Advertisement

Pro Kabaddi:ಇಂದಿನಿಂದ ಪಂಚಕುಲದಲ್ಲಿ ಹೋರಾಟ

10:49 PM Feb 15, 2024 | Team Udayavani |

ಪಂಚಕುಲ: ಪ್ರೊ ಕಬಡ್ಡಿ ಹತ್ತನೇ ಆವೃತ್ತಿ ಕೊನೆ ಹಂತಕ್ಕೆ ತಲುಪಿದೆ. ಸ್ಪರ್ಧೆಯಲ್ಲಿರುವ 12 ತಂಡಗಳಲ್ಲಿ ಈಗಾಗಲೇ 5 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಗಳಿಸಿವೆ. ಇನ್ನೊಂದು ತಂಡ ಯಾವುದೆಂದು ಈ ವಾರ ಖಚಿತವಾಗಲಿದೆ.

Advertisement

ಹರಿಯಾಣ ಸ್ಟೀಲರ್ ತಂಡ ತವರು ನೆಲವಾದ ಪಂಚಕುಲದಲ್ಲಿ ನಾಲ್ಕು ಪಂದ್ಯ ಆಡಲಿದೆ. ಹೀಗಾಗಿ ಹರಿಯಾಣಕ್ಕೆ ಮುನ್ನಡೆಯಲು ಹೆಚ್ಚಿನ ಅವಕಾಶವಿದೆ. ಹರಿಯಾಣವು ಶುಕ್ರವಾರ ನಡೆಯುವ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ. ಇನ್ನೊಂದು ಪಂದ್ಯವು ಜೈಪುರ ಪಿಂಕ್‌ ಪ್ಯಾಂಥರ್ ಮತ್ತು ತೆಲುಗು ಟೈಟಾನ್ಸ್‌ ನಡುವೆ ಜರಗಲಿದೆ.

ಪುನೇರಿಗೆ ಅಗ್ರಸ್ಥಾನ
86 ಅಂಕ ಗಳಿಸಿರುವ ಪುನೇರಿ ಪಲ್ಟಾನ್ಸ್‌ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 82 ಅಂಕ ಹೊಂದಿರುವ ಜೈಪುರ ಪಿಂಕ್‌ ಪ್ಯಾಂಥರ್ ದ್ವಿತೀಯ ಸ್ಥಾನದಲ್ಲಿದೆ. ದಬಾಂಗ್‌ ಡೆಲ್ಲಿ, ಪಾಟ್ನಾ ಪೈರೇಟ್ಸ್‌ ಮತ್ತು ಗುಜರಾತ್‌ ಜೈಂಟ್ಸ್‌ ಕೂಡ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿದೆ. ಆರನೇ ಸ್ಥಾನದಲ್ಲಿರುವ ಹರಿಯಾಣ 20 ಅಂಕ ಹೊಂದಿದ್ದರೆ 7ನೇ ಸ್ಥಾನದಲ್ಲಿರುವ ಬೆಂಗಾಲ್‌ ವಾರಿಯರ್ 55 ಅಂಕ ಹೊಂದಿದ್ದು ಮುನ್ನಡೆಯುವ ಅವಕಾಶಕ್ಕಾಗಿ ಹೋರಾಡಲಿದೆ.
ಅಂಕಪಟ್ಟಿಯ ಅಗ್ರ ಎರಡು ತಂಡಗಳು ನೇರವಾಗಿ ಸೆಮಿಫೈನಲಿಗೇರಲಿವೆ. ಅಂಕಪಟ್ಟಿಯ ಮೂರು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಮೊದಲ ಎಲಿಮಿನೇಟರ್‌ ಹಾಗೂ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ ಆಡಲಿವೆ. ಆಬಳಿಕ ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next