Advertisement

ಪ್ರೊ ಕಬಡ್ಡಿ ಅಂತರ್‌ ವಲಯ ಹೋರಾಟ “ಎ’ವಲಯ ತಂಡಗಳ ಪ್ರಾಬಲ್ಯ

07:15 AM Aug 22, 2017 | Team Udayavani |

ಲಕ್ನೋ: ಪ್ರೊ ಕಬಡ್ಡಿ ಲೀಗ್‌ ಐದರಲ್ಲಿ ಲಕ್ನೋ ಚರಣದ ಪಂದ್ಯಗಳು ಸದ್ಯ ಸಾಗುತ್ತಿವೆ. ಈ ಬಾರಿ ಭಾಗವಹಿಸುತ್ತಿರುವ 12 ತಂಡಗಳನ್ನು “ಎ’ ಮತ್ತು “ಬಿ’ ವಲಯಗಳನ್ನಾಗಿ ವಿಂಗಡಿಸಲಾಗಿದ್ದು ಪ್ರತಿ ವಲಯದಲ್ಲಿ ಆರು ತಂಡಗಳಿವೆ. ಪ್ರತಿ ಚರಣದ ನಡುವೆ ಆಯಾಯ ವಲಯದ ತಂಡಗಳ ನಡುವೆ ಪಂದ್ಯಗಳು ನಡೆಯುತ್ತಿವೆ. ಇದರ ಜತೆ ಅಂತರ್‌ ವಲಯ ನಡುವೆಯೂ ಕೆಲವು ಪಂದ್ಯಗಳನ್ನು ನಡೆಸಲಾಗಿದೆ. 

Advertisement

“ಎ’ ಮತ್ತು “ಬಿ’ ವಲಯಗಳ ನಡುವೆ ಇಷ್ಟರವರೆಗೆ 12 ಪಂದ್ಯಗಳು ನಡೆದಿದ್ದು “ಎ’ ವಲಯದ ತಂಡಗಳು ಪ್ರಾಬಲ್ಯ ಸ್ಥಾಪಿಸಿವೆ. ಕೆಲವೊಂದು ಪಂದ್ಯಗಳು ರೋಚಕವಾಗಿ ಸಾಗಿವೆ.

ತವರಿನ ಪಂದ್ಯಗಳಲ್ಲಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ಅಮೋಘ ನಿರ್ವಹಣೆ ದಾಖಲಿಸಿದ್ದರಿಂದ “ಎ’ ವಲಯ ಪ್ರಾಬಲ್ಯ ಸ್ಥಾಪಿಸಲು ಸಾಧ್ಯವಾಯಿತು. ಅಹ್ಮದಾಬಾದ್‌ನಲ್ಲಿ ನಡೆದ ತವರಿನ ಪಂದ್ಯಗಳಲ್ಲಿ ಗುಜರಾತ್‌ ಯಾವುದೇ ಪಂದ್ಯದಲ್ಲಿ ಸೋಲಿಲ್ಲ. ಐದು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಗುಜರಾತ್‌ ಒಂದು ಪಂದ್ಯದಲ್ಲಿ ತೀವ್ರ ಹೋರಾಟ ನಡೆಸಿ ಟೈ ಸಾಧಿಸಿತ್ತು. ಇದರಿಂದಾಗಿ ಆಡಿದ 9 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಒಟ್ಟು 36 ಅಂಕಗಳೊಂದಿಗೆ “ಎ’ ವಲಯದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತಾಯಿತು. ತಂಡದ ಈ ಅಮೋಘ ಆಟದಿಂದಾಗಿ ಅಂತರ್‌ ವಲಯ ಹೋರಾಟದಲ್ಲೂ ತಂಡ ಭರ್ಜರಿ ನಿರ್ವಹಣೆ ನೀಡುವಂತಾಯಿತು. ಈ ಋತುವಿನಲ್ಲಿ ಆಡುತ್ತಿರುವ ನಾಲ್ಕು ಹೊಸ ತಂಡಗಳಲ್ಲಿ ಒಂದಾದ ಗುಜರಾತ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದಾಗಿದೆ.

ದಕ್ಷಿಣ ಭಾರತದ ಮೂರು ತಂಡಗಳ ನಿರ್ವಹಣೆ ಕಳಪೆ ಮಟ್ಟದಲ್ಲಿದೆ. ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರಾದ ರೋಹಿತ್‌ ಕುಮಾರ್‌, ರಾಹುಲ್‌ ಚೌಧರಿ ಮತ್ತು ಅಜಯ್‌ ಥಾಕುರ್‌ ನೇತೃತ್ವದ ಬೆಂಗಳೂರು ಬುಲ್ಸ್‌, ತೆಲುಗು ಟೈಟಾನ್ಸ್‌ ಮತ್ತು ಹೊಸ ತಂಡ ತಮಿಳ್‌ ತಲೈವಾಸ್‌ ತಂಡಗಳ ನಿರ್ವಹಣೆ ನೀರಸವಾಗಿದೆ. ಬುಲ್ಸ್‌ ಆಡಿದ 9 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಜಯ ಗಳಿಸಿದ್ದರೆ ಟೈಟಾನ್ಸ್‌ ಸತತ ಎಂಟು ಪಂದ್ಯಗಳಲ್ಲಿ ಸೋತಿತ್ತು. ತಲೈವಾಸ್‌ ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದು “ಬಿ’ ಬಣದಲ್ಲಿ ಕೊನೆಯ ಸ್ಥಾನದಲ್ಲಿದೆ.

ಕಳೆದೊಂದು ವಾರ 12 ಪಂದ್ಯಗಳು ನಡೆದಿದ್ದು 9 ಪಂದ್ಯಗಳು “ಎ’ ಬಣದ ಪರವಾಗಿವೆ. ಎರಡು ಪಂದ್ಯಗಳು ಟೈಗೊಂಡಿವೆ. ಹೀಗಾಗಿ “ಬಿ’ ವಲಯ ಬಹಳಷ್ಟು ಒತ್ತಡಕ್ಕೆ ಸಿಲುಕಿವೆ. ಮುಂದಿನ ಅಂತರ್‌ ವಲಯ ಸುತ್ತಿನ ಹೋರಾಟ ಸೆಪ್ಟಂಬರ್‌ ತಿಂಗಳ ಆರಂಭದಲ್ಲಿ ನಡೆಯಲಿದೆ.

Advertisement

ಕಬಡ್ಡಿ ಲೀಗ್‌ ಐದನೇ ಋತು ಮೂರನೇ ವಾರದಲ್ಲಿ ಸಾಗುತ್ತಿದ್ದು ಪಂದ್ಯಗಳು ತೀವ್ರ ಹೋರಾಟದಿಂದ ಸಾಗುತ್ತಿವೆ. ಆರಂಭದ ಕೆಲವು ಪಂದ್ಯಗಳು ಅಭ್ಯಾಸ ಪಂದ್ಯಗಳಾಗಿ ನಡೆದಿದ್ದವು. ಆದರೆ ಇದೀಗ ಪ್ರತಿಯೊಂದು ತಂಡವೂ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಈ ವಾರದ ಪಂದ್ಯಗಳಲ್ಲಿ ಎರಡು ಟೈಗೊಂಡಿದ್ದರೆ ಎರಡು ಪಂದ್ಯಗಳಲ್ಲಿ ಸುಲಭ ಗೆಲುವು ದಾಖಲಾಗಿದೆ. ಆದರೆ ಇನ್ನುಳಿದ 8 ಪಂದ್ಯಗಳ ಫ‌ಲಿತಾಂಶ ಕೊನೆ ನಿಮಿಷದ ಆಟದಲ್ಲಿ ನಿರ್ಧಾìವಾಗಿವೆ. ಇದರರ್ಥ ಯಾವುದೇ ತಂಡಗಳು ಸುಲಭವಾಗಿ ಶರಣಾಗುವುದನ್ನು ಇಷ್ಟಪಡುವುದಿಲ್ಲ. ಯುಪಿ ಯೋಧಾ ತವರಿನ ಮೂರು ಪಂದ್ಯಗಳಲ್ಲಿ ತೀವ್ರ ಹೋರಾಟ ನೀಡಿ ಕೊನೆ ಕ್ಷಣದಲ್ಲಿ ಎಡವಿ ಸೋತಿರುವುದನ್ನು ನೋಡಿದರೆ ಪಂದ್ಯದ ತೀವ್ರತೆ ಎಷ್ಟಿರಬಹುದೆಂದು ತಿಳಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next