Advertisement

Pro Kabaddi: ಬುಲ್ಸ್‌-ಪಾಟ್ನಾ ಪಂದ್ಯ ಟೈ

12:08 AM Feb 01, 2024 | Team Udayavani |

ಪಾಟ್ನಾ: ಬೆಂಗಳೂರು ಬುಲ್ಸ್‌ ಮತ್ತು ಆತಿಥೇಯ ಪಾಟ್ನಾ ಪೈರೇಟ್ಸ್‌ ನಡುವಿನ ಬುಧವಾರದ ಪ್ರೊ ಕಬಡ್ಡಿ ಪಂದ್ಯ ರೋಚಕ ಹೋರಾಟ ಕಂಡು 29-29 ಅಂಕಗಳಿಂದ ಟೈ ಆಯಿತು. ಇದರೊಂದಿಗೆ ಜೈಪುರ್‌ ಪಿಂಕ್‌ ಪ್ಯಾಂಥರ್ನಂತೆ ಪಾಟ್ನಾ ಪೈರೇಟ್ಸ್‌ ಕೂಡ ತವರಿನ ಆವೃತ್ತಿಯಲ್ಲಿ ಅಜೇಯವಾಗಿ ಉಳಿಯಿತು.

Advertisement

ಗುರುವಾರ ಪ್ರೊ ಕಬಡ್ಡಿ ಪಂದ್ಯಾವಳಿಗೆ ವಿರಾಮವಾಗಿದ್ದು, ಶುಕ್ರವಾರದಿಂದ ಹೊಸದಿಲ್ಲಿ ಆವೃತ್ತಿ ಮೊದಲ್ಗೊಳ್ಳಲಿದೆ.
ಇತ್ತಂಡಗಳು ಆರಂಭದಿಂದಲೇ ತೀವ್ರ ಪೈಪೋಟಿಗಿಳಿದ ಕಾರಣ ಪಂದ್ಯ ಅತ್ಯಂತ ರೋಚಕವಾಗಿ ಸಾಗಿತು. ಕೊನೆಯ ರೈಡ್‌ನ‌ಲ್ಲಿ ಬುಲ್ಸ್‌ ತಂಡದ ಭರತ್‌ ಒಂದಂಕ ತರುವುದರೊಂದಿಗೆ ಪಾಟ್ನಾದ ಗೆಲುವಿನ ಆಸೆ ಕಮರಿತು. ಪಾಟ್ನಾ ಪರ ರೈಡರ್‌ ಸಂದೀಪ್‌ ಕುಮಾರ್‌ ಸರ್ವಾಧಿಕ 14 ಅಂಕ ಗಳಿಸಿದರು. ಬುಲ್ಸ್‌ ರೈಡರ್‌ ಸುಶೀಲ್‌ 8 ಅಂಕ ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ತಮಿಳ್‌ ತಲೈವಾಸ್‌ಗೆ 42-27 ಅಂತರದ ಸೋಲುಣಿಸಿದ ಜೈಪುರ್‌ ಪಿಂಕ್‌ ಪ್ಯಾಂಥರ್ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು (71 ಅಂಕ). ಇದು 17 ಪಂದ್ಯಗಳಲ್ಲಿ ಜೈಪುರ್‌ ಸಾಧಿಸಿದ 12ನೇ ಗೆಲುವು. ಮಂಗಳವಾರ ನಂ.1 ಸ್ಥಾನಕ್ಕೆ ನೆಗೆದಿದ್ದ ಪುನೇರಿ 2ನೇ ಸ್ಥಾನಕ್ಕೆ ಇಳಿಯಿತು (68 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next