Advertisement
ಇನ್ನೊಂದೆಡೆ ಯುಪಿ ಯೋಧಾಸ್ ಇದುವರೆಗೆ 4 ಪಂದ್ಯಗಳನ್ನಾಡಿದ್ದು ಮೂರರಲ್ಲಿ ಸೋತು ಆಘಾತ ಅನುಭವಿಸಿದೆ. ಸತತ 2ನೇ ದಿನವೂ ಅದು ಸೋಲಿಗೆ ತುತ್ತಾಯಿತು. ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಹರ್ಯಾಣ 27-45 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ವಿರುದ್ಧ ಪಲ್ಟಿ ಹೊಡೆಯಿತು.
ಯುಪಿ ಯೋಧಾಸ್ ಜಯ ಸಾಧಿಸುವ ಉಮೇದಿನಿಂದ ಕಣಕ್ಕಿಳಿದಿತ್ತು. ಅದರ ಯೋಜನೆಯನ್ನು ಪಾಟ್ನಾ ಪೈರೇಟ್ಸ್ ವಿಫಲಗೊಳಿಸಿತು. ಪಾಟ್ನಾ ಪರ ಎಂದಿನಂತೆ ಪ್ರದೀಪ್ ನರ್ವಾಲ್ ಪ್ರಬಲ ದಾಳಿ ನಡೆಸಿ 17 ಅಂಕಗಳನ್ನು ಗಳಿಸಿದರು. ಪ್ರದೀಪ್‌ಗೆ ದೀಪಕ್ ನರ್ವಾಲ್ ದಾಳಿಯಲ್ಲಿ ಸಾಥ್ ನೀಡಿದರು. ಅವರು 10 ಅಂಕ ಗಳಿಸಿದರು. ರಕ್ಷಣೆಯಲ್ಲಿ ಪಾಟ್ನಾ ಸಂಘಟಿತ ಯಶಸ್ಸು ಗಳಿಸಿದರೂ ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇದೇ ಮಾತು ಯುಪಿ ಯೋಧಾಸ್ ತಂಡಕ್ಕೂ ಅನ್ವಯಿಸುತ್ತದೆ. ಯುಪಿ ಕೂಡ ದಾಳಿಯಲ್ಲಿ ಮಿಂಚಿದರೂ ರಕ್ಷಣಾ ವಿಭಾಗದಲ್ಲಿ ಘೋರ ವೈಫಲ್ಯ ಎದುರಿಸಿತು. ಯುಪಿ ಪರ ಶ್ರೀಕಾಂತ್ ಜಾಧವ್ ದಾಳಿಯಲ್ಲಿ ಮಿಂಚಿದರು. ಅವರು 17 ಅಂಕ ಗಳಿಸಿ ಎದುರಾಳಿ ಪಾಟ್ನಾ ಆಟಗಾರ ಪ್ರದೀಪ್‌ಗೆ ಸರಿಸಮನಾಗಿ ನಿಂತರು. ಆದರೆ ರಕ್ಷಣಾ ವಿಭಾಗದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಬರದಿದ್ದುದು ಯುಪಿ ಸೋಲಿಗೆ ಕಾರಣವಾಯಿತು.