Advertisement
ಬುಧವಾರ ಇಲ್ಲಿನ ತ್ಯಾಗರಾಜ್ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಗ್ರಗಣ್ಯರ ಕಳಪೆ ಆಟ ಜೈಪುರ ತಂಡಕ್ಕೆ ಸೋಲು ಅನುಭವಿಸುವಂತೆ ಮಾಡಿತು. ಕೊನೆಯ 7 ನಿಮಿಷದಲ್ಲಿ ಜೈಪುರ 38-31 ಅಂತರದಿಂದ ಹಿಂದಿತ್ತು. ಗೆಲುವಿಗೆ 7 ಅಂಕ ಬೇಕಾಗಿತ್ತು. ಈ ವೇಳೆ ಜೈಪುರ ತಂಡದಿಂದ ಪವಾಡ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು.
Related Articles
2ನೇ ಅವಧಿಯ 10 ನಿಮಿಷದ ಆಟದಲ್ಲಿ ಜೈಪುರ ಮಿಂಚಿನ ಆಟವಾಡಿತು. ಒಂದು ಸಲ ತೆಲುಗು ತಂಡವನ್ನು ಆಲೌಟ್ ಮಾಡಿ ಬೀಗಿತು. ಪವನ್ (16 ಅಂಕ) ರೈಡಿಂಗ್‌ನಿಂದ ಅಂಕಗಳಿಕೆಯ ಅಂತರವನ್ನು ಒಟ್ಟಾರೆ 25-31ಕ್ಕೆ ಹೆಚ್ಚಿಸಿಕೊಂಡಿತು. ಜೈಪುರ ಅಂಕಗಳಿಕೆಯನ್ನು ಹೆಚ್ಚಿಸಿದ್ದು ಪವನ್ ಮಿಂಚಿನ ಆಟ. ಅವರ ರೈಡಿಂಗ್‌ಗೆ ತೆಲುಗು ಟೈಟಾನ್ಸ್ ಅಕ್ಷರಶಃ ನಡುಗಿತು. ಹಾಗಂತ ತೆಲುಗು ಅಂಕಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ. ನಿಧಾನವಾಗಿ ಚೇತರಿಸಿಕೊಂಡಿತು. ಮುನ್ನಡೆಯಲ್ಲೇ ಮುಂದುವರಿದಿತ್ತು.
Advertisement
ತೆಲುಗು ಕೈಹಿಡಿದ ರಾಹುಲ್:ಮೊದಲ ಅವಧಿಯ 10 ನಿಮಿಷದ ಆಟದಲ್ಲಿ 2 ತಂಡಗಳಿಂದ ಸಮಬಲದ ಹೋರಾಟ. ಈ ಹಂತದಲ್ಲಿ ತೆಲುಗು ಟೈಟಾನ್ಸ್ ನಾಯಕ ರೋಹಿತ್ ರಾಣಾ ಅನಾವಶ್ಯಕ ಹಿಡಿತಕ್ಕೆ ಕೈ ಹಾಕಿ 2 ಸಲ ಔಟಾದರು. ಅಲ್ಲದೆ 2ನೇ ಅವಧಿಯುದ್ದಕ್ಕೂ ಅವರಿಂದ ಇಂತಹುದೇ ಆಟ ಮುಂದುವರಿಯಿತು. ಆದರೆ ರೈಡರ್ ರಾಹುಲ್ ತಂಡದ ಕೈಹಿಡಿದರು. ಅಂಕವನ್ನು ಸೇರಿಸುತ್ತಾ ಹೋದರು. ಆತಂಕವನ್ನು ದೂರ ಮಾಡಿದರು. ಇವರ ಮಾರಕ ದಾಳಿಗೆ ಸಿಲುಕಿ 11ನೇ ನಿಮಿಷದಲ್ಲಿ ಜೈಪುರ ಮೊದಲ ಸಲ ಆಲೌಟಾಯಿತು. ತೆಲುಗು ಈ ವೇಳೆ ಅಂಕಗಳಿಕೆಯನ್ನು 15-5ಕ್ಕೆ ಹೆಚ್ಚಿಸಿಕೊಂಡಿತು. ಬಳಿಕ ತೆಲುಗು ಇದೇ ರಭಸದ ಆಟ ಮುಂದುವರಿಸಿತು. ಮೊದಲ ಅವಧಿ ಮುಗಿಯಲು 3 ನಿಮಿಷ ಬಾಕಿ ಇದ್ದಾಗ ಜೈಪುರ 8-21ರಿಂದ ಭಾರೀ ಅಂತರದ ಹಿನ್ನಡೆಗೆ ಒಳಗಾಯಿತು. ನಂತರದ ಹಂತದಲ್ಲಿ ಸ್ವಲ್ಪ ಚೇತರಿಸಿಕೊಂಡು 23-11 ಅಂತರವನ್ನು ತಗ್ಗಿಸಿಕೊಂಡಿತು. ತೆಲುಗು ಭಾರೀ ಮುನ್ನಡೆಯಲ್ಲಿತ್ತು. – ಹೇಮಂತ್ ಸಂಪಾಜೆ