Advertisement
ಬೆಂಗಳೂರು ಬುಲ್ಸ್ ತನ್ನ ಆರಂಭಿಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಎಡವಿತ್ತು. ಬೆಂಗಾಲ್ ಎದುರು ಆರಂಭದಿಂದಲೇ ಹಿನ್ನಡೆ ಕಾಣುತ್ತ ಹೋದ ಬುಲ್ಸ್ ಕೊನೆಯ 5 ನಿಮಿಷದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಂತಿಮ ಕ್ಷಣದಲ್ಲಿ ಬೆಂಗಾಲ್ ಮತ್ತೆ ಮೇಲುಗೈ ಸಾಧಿಸಿ ರೋಚಕ ಗೆಲುವು ಸಾಧಿಸಿತು.ಬೆಂಗಾಲ್ ಜಯದಲ್ಲಿ ನಾಯಕ ಮಣಿಂದರ್ ಸಿಂಗ್ ಪ್ರಮುಖ ಪಾತ್ರ ವಹಿಸಿದರು (11 ಅಂಕ). ಡಿಫೆಂಡರ್ ಶುಭಂ ಶಿಂಧೆ ಮತ್ತು ರೈಡರ್ ವಿಶ್ವಾಸ್ ತಲಾ 4 ಅಂಕ ಗಳಿಸಿದರು. ಬುಲ್ಸ್ ಸಾಂ ಕ ಆಟದ ಮೂಲಕ ಗಮನ ಸೆಳೆದರೂ ದಡ ಸೇರುವಲ್ಲಿ ವಿಫಲವಾಯಿತು. ರೈಡರ್ ಭರತ್ 6, ನೀರಜ್ ನರ್ವಾಲ್ 5 ಅಂಕ ಸಂಪಾದಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ ಮೊದಲ ಪಂದ್ಯದಲ್ಲಿ ಪುನೇರಿ ಪಲ್ಟಾನ್ 37-33 ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿತು. ಮೊದಲ ಅವಧಿಯ ಆಟದಲ್ಲಿ ಜೈಪುರ್ 18-14 ಅಂತರದ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪುನೇರಿ ತಿರುಗಿ ಬಿತ್ತು. ಪುನೇರಿ ಗೆಲುವಿನಲ್ಲಿ ನಾಯಕ, ರೈಡರ್ ಅಸ್ಲಾಂ ಮುಸ್ತಾಫಾ ಪ್ರಧಾನ ಪಾತ್ರ ವಹಿಸಿದರು. ಇವರದು ಗರಿಷ್ಠ 10 ಅಂಕಗಳ ಸಾಧನೆ.