Advertisement

ಜಮ್ಮು ಕಾಶ್ಮೀರದಲ್ಲಿ ಒಂಟಿ ತೋಳ ಉಗ್ರ ದಾಳಿಗೆ ಐಸಿಸ್‌ ಯತ್ನ

06:58 PM Jan 18, 2018 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಒಂಟಿ ತೋಳ ಉಗ್ರ ದಾಳಿ ನಡೆಸುವುದಕ್ಕಾಗಿ ಐಸಿಸ್‌ ಉಗ್ರ ಸಂಘಟನೆಗೆ ಸಹಾನುಭೂತಿ ಹೊಂದಿರುವ ಸಮೂಹಗಳು ಅರ್ಹ ಯುವಕರನ್ನು ನೇಮಕ ಮಾಡುವ ಕೆಲಸದಲ್ಲಿ ಸಕ್ರಿಯವಾಗಿವೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

Advertisement

ಐಸಿಸ್‌ ಉಗ್ರ ಸಂಘಟನೆಗೆ ಸಹಾನುಭೂತಿ ಹೊಂದಿರುವ ಹಾಗೂ ಜಮ್ಮು ಕಾಶ್ಮೀರದಲ್ಲಿ ಶರೀಯತ್‌ ಕಾನೂನು ಮತ್ತು ಖಲೀಫ‌ ಆದಿಪತ್ಯವನ್ನು ಜಾರಿಗೆ ತರುವ ಬಯಕೆ ಹೊಂದಿರುವ ಈ ಸಮೂಹಗಳು ರಾಜ್ಯದಲ್ಲಿನ ಉಗ್ರ ಸ್ವಭಾವದ ಯುವಕರ ಬುದ್ಧಿಪಲ್ಲಟಿಸುವ ದಿಶೆಯಲ್ಲಿ ಕಾರ್ಯವೆಸಗುತ್ತಿವೆ ಎಂದು ಮೂಲಗಳು ಹೇಳಿವೆ. 

ಗೃಹ ಸಚಿವಾಲಯದ ಸೈಬರ್‌ ದಳವು ಜಮ್ಮು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಟೆಲಿಗ್ರಾಮ್‌ ಚ್ಯಾನಲ್‌ಗ‌ಳನ್ನು ಪತ್ತೆ ಹಚ್ಚಿದ್ದು ಅವುಗಳಲ್ಲಿ  ಒಂಟಿ ತೋಳ ಉಗ್ರ ದಾಳಿ ಕೈಗೊಳ್ಳಬಯಸುವ ಯುವಕರ ಬುದ್ದಿ ಪಲ್ಲಟಿಸುವ ಫೋಟೋಗಳು, ಮಾಹಿತಿಗಳು, ಲೇಖನಗಳು ಮುಂತಾಗಿ ಹಲವು ಬಗ್ಗೆ ಉಗ್ರ ಕಾರ್ಯಚಟುವಟಿಕೆಗಳ ಮಾಹಿತಿ ಇರುವುದನ್ನು ಗಮನಿಸಿದೆ. 

ಈ ರೀತಿಯ ಟೆಲಿಗ್ರಾಂ ಚ್ಯಾನಲ್‌ ಒಂದನ್ನು 2017ರ ಸೆ.23 ರಂದು ಸೃಷ್ಟಿಸಲಾಗಿತ್ತು. ಅನಂತರ ಅದೇ ವರ್ಷ ಇದನ್ನು ಅಕ್ಟೋಬರ್‌ 3ರಂದು ಪುನರ್‌ ನಾಮಕರಣ ಮಾಡಲಾಗಿತ್ತು. ಈ ಚ್ಯಾನಲ್‌ಗೆ 223 ಸದಸ್ಯರಿದ್ದಾರೆ. 

ಕಡತ ಮತ್ತು ಡಿಸ್ಕ್ ಗಳನ್ನು  ಎನ್‌ಕ್ರಿಪ್ಟ್ ಮಾಡಲು ಬಳಸುವ “ವೆರಾಕ್ರಿಪ್ಟ್’ ತಂತ್ರಾಂಶವನ್ನು ಕೂಡ ಈ ಚ್ಯಾನಲ್‌ ಪೋಸ್ಟ್‌ ಮಾಡಿದೆ. ಹಾಗೆಯೇ ಒಂಟಿ ತೋಳ ಉಗ್ರ ದಾಳಿಯನ್ನು ಸಂಘಟಿಸುವ ಕಾರ್ಯತಂತ್ರದ ವಿವರಗಳನ್ನು ಕೂಡ ಈ ಚ್ಯಾನಲ್‌ ನಲ್ಲಿ ಹಾಕಿರುವುದು ಕಂಡು ಬಂದಿದೆ. 

Advertisement

ಈ ರೀತಿಯ ಸಮೂಹಗಳ ಎಡ್ಮಿನ್‌ ಯಾರೆಂಬುದನ್ನು ಪತ್ತೆ ಹಚ್ಚುವಂತೆ ಗೃಹ ಸಚಿವಾಲಯ ತನ್ನ ಸೈಬರ್‌ ದಳಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next