Advertisement
ಬೂದು ಕುಂಬಳಕಾಯಿ ಕೆ.ಜಿ.ಗೆ 10ರಿಂದ 15 ರೂ. ಇದೆ. ಆದರೆ, ಹೂವಿನ ಬೆಲೆಗಳು ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿ.ಗೆ 400ರಿಂದ 500 ರೂ.ಗಳ ವರೆಗಿದ್ದರೆ, ಕನಕಾಂಬರ 1,200 ರೂ. ಸೆವಂತಿಗೆ, ಬಟನ್ಸ್, ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿ.ಗೆ 150 ರೂ. ದಾಟಿವೆ. ಬಾಳೆ ಹಣ್ಣು ಕೆ.ಜಿ.ಗೆ 20ರಿಂದ 60 ರೂ. ಸೇರಿದಂತೆ ಇತರ ಹಣ್ಣುಗಳ ಬೆಲೆಯೂ ಕೆ.ಜಿ.ಗೆ 20ರಿಂದ 30 ರೂ. ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ಮಗ್ಗಗಳ ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುದ್ಧ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
Related Articles
Advertisement
ಸಾರ್ವಜನಿಕರ ಕೆಲಸದ ಸಮಯದಲ್ಲಿ ಪೂಜೆಗಾಗಿ ಸಮಯ ಕಳೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ತಾಜಾ ಹೂವುಗಳಿಗೆ ಬೆಲೆ ಅಧಿಕವಾದರೂ ಹೆಚ್ಚಿದ ಬೇಡಿಕೆ ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆ ಬೀಳುತ್ತಿದ್ದು, ಹೂವುಗಳ ಮೇಲೆ ತೇವಾಂಶ ಹೆಚ್ಚಾಗಿ ಸಹಜವಾಗಿ ಬೆಲೆಗಳು ಹೆಚ್ಚಾಗಿವೆ. ಮಳೆಯಲ್ಲಿ ತೊಯ್ದಿರುವ ಹೂಗಳ ಬೆಲೆ ಕಡಿಮೆಯಿದ್ದರೆ, ತಾಜಾ ಹೂವುಗಳ ಬೆಲೆಗಳು ಹೆಚ್ಚಾಗಿವೆ. ಬೆಲೆ ಏರಿಕೆ ನೋಡಿದರೆ ಹಬ್ಬ ಮಾಡಲು ಉತ್ಸಾಹವೇ ಇಲ್ಲದಿದ್ದರೂ, ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸಲೇಬೇಕಲ್ಲ ಎನ್ನುತ್ತಾರೆ ಬಹುಪಾಲು ಸಾರ್ವಜನಿಕರು.