Advertisement

“ಯಶೋದಾ ಕೃಷ್ಣ’ಫೋಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

12:33 AM Oct 14, 2020 | mahesh |

ಉಡುಪಿ: “ಉದಯವಾಣಿ’ ದಿನಪತ್ರಿಕೆಯು ಉದ್ಯಾವರದ ಪ್ರತಿಷ್ಠಿತ ಜಯಲಕ್ಷ್ಮೀ ಸಿಲ್ಕ್ಸ್ ಸಹಯೋಗದಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಓದುಗರಿಗಾಗಿ ನಡೆಸಿದ “ಯಶೋದಾ ಕೃಷ್ಣ’ ಫೋಟೋ ಸ್ಪರ್ಧೆ ಕೇವಲ ಫೋಟೋ ಸ್ಪರ್ಧೆಯಲ್ಲ. ಹಲವು ಕಲೆಗಳ ಸಂಗಮ ಇಲ್ಲಿರುತ್ತದೆ ಎಂದು ಕಲಾವಿದೆ ಮಾನಸಿ ಸುಧೀರ್‌ ಕೊಡವೂರು ಅಭಿಪ್ರಾಯಪಟ್ಟರು.

Advertisement

ಸ್ಪರ್ಧಾ ವಿಜೇತರಾದವರಿಗೆ ಅ. 13ರಂದು ನಗರದಲ್ಲಿ ಜರಗಿದ ಬಹುಮಾನ ವಿತರಣೆ ಸಮಾರಂಭದಲ್ಲಿ ತೀರ್ಪು ಗಾರರಲ್ಲಿ ಒಬ್ಬರಾದ ಮಾನಸಿ ಅವರು ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳನ್ನು ಅಲಂಕರಿಸಿ ಫೋಟೋ ಕ್ಲಿಕ್ಕಿಸುವವರೆಗೂ ಸಂರಕ್ಷಿಸುವುದು, ತಾಯಂದಿರು ಯಶೋದೆ ರೂಪದಲ್ಲಿ ಕಂಡುಬರುವುದು, ಹಲವು ರಂಗಪರಿಕರಗಳ ಸಂಗಮ, ಇವೆಲ್ಲವನ್ನೂ ಹಿಡಿದಿಡುವ ಛಾಯಾಚಿತ್ರಗ್ರಾಹಕರ ಪರಿಶ್ರಮ ಹೀಗೆ ಬಹು ಆಯಾಮಗಳು ಇಲ್ಲಿವೆ. ಇದಕ್ಕಾಗಿ “ಉದಯವಾಣಿ’ ಮತ್ತು ಜಯಲಕ್ಷ್ಮೀ ಸಿಲ್ಕ್ಸ್ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಜಯಲಕ್ಷ್ಮೀ ಸಿಲ್ಕ್ಸ್ ನ ಪಾಲುದಾರರಲ್ಲಿ ಒಬ್ಬರಾದ ಅಪರ್ಣಾ ಆರ್‌. ಹೆಗ್ಡೆ ಅವರು, “ಉದಯವಾಣಿ’ ಪತ್ರಿಕೆಯನ್ನು ನಾವು ಚಿಕ್ಕಂದಿನಿಂದಲೂ ಓದುತ್ತ ಬೆಳೆದವರು. ಅದರಲ್ಲಿ ಬರುತ್ತಿದ್ದ ಪದಬಂಧವನ್ನು ತುಂಬಿಸುವಲ್ಲಿ ನಮ್ಮ ಮನೆಯಲ್ಲಿ ಸ್ಪರ್ಧೆ ನಡೆಯುತ್ತಿತ್ತು. ಪತ್ರಿಕೆಗೆ ರಜೆ ಇರುವಾಗ ಹಿಂದಿನ ದಿನದ ಪತ್ರಿಕೆಗಳನ್ನು ಓದುತ್ತಿದ್ದೆವು. ಈಗಲೂ ಉದಯವಾಣಿ ಮನೆಗೆ ಬರುವವರೆಗೆ ಕಾಯುತ್ತಿರುತ್ತೇವೆ. ಇನ್ನು ಮುಂದೆಯೂ ಇಂತಹ ಸ್ಪರ್ಧೆಗಳಿಗೆ ನಮ್ಮ ಸಂಸ್ಥೆಯಿಂದ ಬೆಂಬಲ ನೀಡುವೆವು ಎಂದರು. ಜಯಲಕ್ಷ್ಮೀ ಸಿಲ್ಕ್ಸ್ ನ ಇನ್ನೋರ್ವ ಪಾಲುದಾರರಾದ ಜಯಲಕ್ಷ್ಮೀ ವಿ. ಹೆಗ್ಡೆ, ಮಾ| ವಿಘ್ನೇಶ್‌ ಆರ್‌. ಹೆಗ್ಡೆ ಸಮಾರಂಭ ದಲ್ಲಿ ಉಪಸ್ಥಿತರಿದ್ದರು.

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ. ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು ಅವರು ಸ್ವಾಗತಿಸಿ, ಪ್ರಸರಣ ವಿಭಾಗದ ಡಿಜಿಎಂ ಸತೀಶ್‌ ಶೆಣೈ ಅವರು ಬಹುಮಾನಿತರ ಪಟ್ಟಿ ವಾಚಿಸಿದರು. ಉದಯವಾಣಿ ಸಂಪಾದಕ ಅರವಿಂದ ನಾವಡ ಅವರು ಪ್ರಸ್ತಾವನೆ ಗೈದರು. ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು  ಅವರು ವಂದಿಸಿದರು. ಉಪಸಂಪಾದಕಿ ಪ್ರೀತಿ ಭಟ್‌ ಗುಣವಂತೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಬಹುಮಾನ ವಿಜೇತರ ಪರವಾಗಿ ಕಾರ್ಕಳದ ಪ್ರತೀಕ್ಷಾ ಪೈ, ಕಾಸರಗೋಡು ಕಾಟುಕುಕ್ಕೆಯ ಮಧುಮತಿ, ಉಜಿರೆಯ ರಾಧಾಕೃಷ್ಣ ಹೊಳ್ಳ, ಮಂಗಳೂರು ಕುಲಶೇಖರದ ಕಾವ್ಯಾ ಸಾಲ್ಯಾನ್‌, ಕಿರಣ್‌ ಉದ್ಯಾವರ ಅನಿಸಿಕೆ ವ್ಯಕ್ತಪಡಿಸಿದರು.

ಬಹುಮಾನ ವಿಜೇತರು
ಸ್ಪರ್ಧೆಗೆ ಓದುಗರಿಂದ ವ್ಯಕ್ತವಾದ ಸ್ಪಂದನೆ ಅನುಪಮ. ನಾಡಿನ ನಾನಾ ಭಾಗಗಳಿಂದ ಬಂದ ಒಟ್ಟು ಫೋಟೋ ಗಳ ಸಂಖ್ಯೆ 5,500ಕ್ಕೂ ಹೆಚ್ಚು. ಇವುಗಳಲ್ಲಿ ಆಯ್ದ ಚಿತ್ರಗಳಿಗೆ ಫ‌ಲಿತಾಂಶವನ್ನು ಪ್ರಕಟಿಸಲಾಗಿದ್ದು ವಿವರ ಇಂತಿದೆ:

Advertisement

ಪ್ರಥಮ: ಅತ್ರಿಯಾ-ಪ್ರತೀಕ್ಷಾ ಪೈ, ಕಾರ್ಕಳ
ದ್ವಿತೀಯ: 1. ಅನ್ವಿತಾ-ಶಾಂತಿ ದೇವಾಡಿಗ, ಸಂತೆಕಟ್ಟೆ, 2. ಆದ್ಯಾ-ಸೌಮ್ಯಾ ಶೆಣೈ, ಶಕ್ತಿನಗರ, ಮಂಗಳೂರು, 3. ಅಭಿರಾಮ್‌-ಮಧುಮತಿ, ಕಾಟುಕುಕ್ಕೆ, ಕಾಸರಗೋಡು.
ತೃತೀಯ: 1. ಗಗನ್‌-ಬಬಿತಾ, ಕೊಟ್ಟಾರ, ಮಂಗಳೂರು, 2. ಏಕತಾ-ಜಯೇಂದ್ರ, ಕಟಪಾಡಿ, 3. ಯುಗಾಂತ್‌-ನಮಿತಾ, ಸಾಲಿಗ್ರಾಮ, 4. ರಿಯಾನ್ಶಿ-ಸೋನಿಯಾ, ಉದ್ಯಾವರ, 5. ದಿವ್ಯಾ-ಆರಾಧ್ಯಾ ಶೆಟ್ಟಿ, ಹಿರೇಬೆಟ್ಟು, ಉಡುಪಿ, 6. ಆದ್ವಿ-ಕಾವ್ಯಾ, ಮಂಗಳೂರು.

ಪ್ರೋತ್ಸಾಹಕರ: 1. ಅಥರ್ವ-ಅರ್ಚನಾ, ಮಂಗಳೂರು, 2. ರಿಶಿಕ್‌- ವಿದ್ಯಾಶ್ರೀ, ಉಡುಪಿ, 3. ಸ್ನಿತಿ-ಸುಮನಾ, ಪೆರ್ಲ, ಕಾಸರಗೋಡು, 4. ಸಾನ್ವಿ-ಸೋನಿಯಾ, ಜೆಪ್ಪು, ಮಂಗಳೂರು, 5. ಈಶಾನಿ-ದೀಪಾ, ಬ್ರಹ್ಮಾವರ, 6. ಈಶಾನ್ಯ-ವಿಂಧ್ಯಾಪ್ರಭು, ಕಾರ್ಕಳ, 7. ಯಶ್ವಿ‌ಕ್‌-ಕೃಪಾಲಿ, ಕುಲಶೇಖರ, ಮಂಗಳೂರು, 8. ಮಾಲಸಿ-ವೈಷ್ಣವಿ, ಬಂಟ್ವಾಳ, 9. ಸಾಧನಾ-ಭವ್ಯಾ, ಉಜಿರೆ, ಬೆಳ್ತಂಗಡಿ, 10. ರೂಪಾ -ಶ್ರೀಹರಿ ಕಿಣಿ, ಬಿಜೂರು, 11. ಶಾಲಿ ನಿ-ಸ್ಕಂದ ಪುತ್ತೂರು, 12. ಸ್ವರಾ-ಬಿಂಬಿಕಾ ಸುಳ್ಯ.

Advertisement

Udayavani is now on Telegram. Click here to join our channel and stay updated with the latest news.

Next