Advertisement

ಪ್ರಿಯಾಂಕಾ ವಾದ್ರಾಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ಸಾಧ್ಯತೆ

06:00 AM Nov 23, 2017 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಯನ್ನು ಅಧ್ಯಕ್ಷ ಹುದ್ದೆಗೇರಿಸುವುದು ಒಂದೆಡೆ ಬಹುತೇಖ ಖಚಿತವಾಗಿರುವಂತೆಯೇ, ಸೋದರಿ ಪ್ರಿಯಾಂಕಾ ಗಾಂಧಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಲೋಕಸಭೆ ಚುನಾವಣೆಯ ಸಮಯದಿಂದಲೇ ಪ್ರಿಯಾಂಕಾರನ್ನು ಅಧ್ಯಕ್ಷ ಹುದ್ದೆಗೇರಿಸಬೇಕು ಹಾಗೂ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಕೂಗು ಪಕ್ಷದೊಳಗಿಂದ ಕೇಳಿಬರುತ್ತಿತ್ತು. ಆದರೆ ಆ ಕೂಗಿನ ಸದ್ದು ಈಗ ಅಡಗಿದೆ. ಉತ್ತರ ಪ್ರದೇಶ ಚುನಾವಣೆಯ ವೇಳೆ ಸೀಟು ಹಂಚಿಕೆಯಲ್ಲಿ ಪ್ರಿಯಾಂಕಾ ಮಹತ್ವದ ಪಾತ್ರ ವಹಿಸಿದ್ದರೂ ಮುಖ್ಯವಾಹಿನಿಯಿಂದ ಅವರು ದೂರವೇ ಇದ್ದರು.

Advertisement

ಮೂಲಗಳ ಪ್ರಕಾರ, 2019ರಲ್ಲಿ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಚುನಾವಣೆಗೂ ಮುನ್ನ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಸಾಧ್ಯತೆಯಿದೆ. ಇನ್ನೊಂದೆಡೆ ಅವರು ಈಗಿನಂತೆಯೇ ಹಿನ್ನೆಲೆಯಲ್ಲಿದ್ದುಕೊಂಡೇ ಪಕ್ಷಗಳ ಮಧ್ಯೆ ಸಹಭಾಗಿತ್ವ, ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next