Advertisement

ರಾಜಕೀಯ ಕಥೆ ಹೇಳಲು ಬಂದ ಪ್ರಿಯಾಂಕಾ ಉಪೇಂದ್ರ

04:43 PM Dec 16, 2022 | Team Udayavani |

ನಟಿ ಪ್ರಿಯಾಂಕಾ ಉಪೇಂದ್ರ “ಪಿ ಪಿ’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ “ಪ್ರಜೆಯೇ ಪ್ರಭುಗಳು’ ಎಂಬ ಟ್ಯಾಗ್‌ಲೈನ್‌ ಇದ್ದು, ಸಾಯಿಲಕ್ಷ್ಮಣ್‌ ಈ ಸಿನಿಮಾದ ನಿರ್ದೇಶಕಕರು.

Advertisement

ರಾಜಕೀಯ ಹಿನ್ನಲೆಯುಳ್ಳ ಮಹಿಳಾ ಪ್ರಧಾನ ಕಥೆಯನ್ನು ಹೊಂದಿದೆ. ಜನರು ನಿಸ್ವಾರ್ಥದಿಂದ ಉನ್ನತ ಹುದ್ದೆಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಅವರು ಅದರ ಪರಿಮಿತಿಯಲ್ಲಿ ಸ್ವಾರ್ಥವನ್ನು ಬಯಸದೆ ಕೆಲಸ ಮಾಡಬೇಕು. ಆಸೆಗಳಿಗೆ ಬಲಿಯಾಗಬಾರದು ಎಂಬ ಕಥಾಹಂದರ ಈ ಚಿತ್ರದ್ದು.

ಉಳಿದಂತೆ ಚಿತ್ರದಲ್ಲಿ ರವಿಶಂಕರ್‌, ರವಿಕಾಳೆ, ರಾಹುಲ್‌ ದೇವ್‌, ಗಿರಿಜಾ ಲೋಕೇಶ್‌, ಯಶ್‌ ಶೆಟ್ಟಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಇನ್ನು ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next