Advertisement

ಪ್ರಿಯನಂದನ್‌ ಮೇಲೆ ಸೆಗಣಿ ಎರಚಿ, ಹಲ್ಲೆ

12:30 AM Jan 26, 2019 | |

ತ್ರಿಶೂರ್‌: ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಫೇಸ್‌ಬುಕ್‌ನಲ್ಲಿ ಸ್ವಾಮಿ ಅಯ್ಯಪ್ಪ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದ ಆರೋಪಕ್ಕೆ ಸಂಬಂಧಿಸಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಿನಿಮಾ ನಿರ್ದೇಶಕ ಪ್ರಿಯನಂದನ್‌ ಅವರ ಮೇಲೆ ಶುಕ್ರವಾರ ದಾಳಿ ನಡೆದಿದೆ. ತಮ್ಮ ನಿವಾಸದ ಹೊರಗೆ ಬರುತ್ತಿದ್ದಂತೆ, ವ್ಯಕ್ತಿಯೊಬ್ಬ ಓಡಿ ಬಂದು ಪ್ರಿಯನಂದನ್‌ ಅವರ ಮೇಲೆ ಸೆಗಣಿ ನೀರು ಎರಚಿದ್ದಲ್ಲದೆ, ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದು ಬಿಜೆಪಿ-ಆರೆಸ್ಸೆಸ್‌ ಕಾರ್ಯಕರ್ತರ ಕೃತ್ಯ ಎಂದು ಅವರು ಆರೋಪಿಸಿದ್ದಾರೆ. ಆದರೆ, ಬಿಜೆಪಿ ಇದನ್ನು ಅಲ್ಲಗಳೆದಿದೆ.

Advertisement

51 ಅಲ್ಲ, 17 ಮಹಿಳೆಯರು: ಈ ನಡುವೆ, 51 ಮಹಿಳೆ ಯರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿ ದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ್ದ ಕೇರಳ ಸರ್ಕಾರ ಈಗ ಆ ಪಟ್ಟಿಯನ್ನು ಪರಿಷ್ಕರಿಸಿದೆ. ದೇಗುಲಕ್ಕೆ ಭೇಟಿ ನೀಡಿದ್ದು 51 ಅಲ್ಲ, 17 ಮಹಿಳೆಯರು ಎಂದು ಪರಿ ಷ್ಕೃತ ಪಟ್ಟಿಯಲ್ಲಿ ವಿವರಿಸಲಾಗಿದೆ. ಸರ್ಕಾರದ ಪಟ್ಟಿಯಲ್ಲಿ ಹಲವು ಎಡವಟ್ಟುಗಳು ಇದ್ದ ಬಗ್ಗೆ ಪ್ರತಿಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next