Advertisement

ಪ್ರೀತಿಗಾಗಿ ಗೌರವ ತ್ಯಾಗ

06:00 AM Jul 05, 2018 | Team Udayavani |

ಟೋಕಿಯೊ: ಬ್ರಿಟನ್‌ನ ರಾಜಕುಮಾರರು ಸಾಮಾನ್ಯ ಕೌಟುಂಬಿಕ ಹಿನ್ನೆಲೆ ಇರುವ ಮಹಿಳೆಯರನ್ನು ಮದುವೆಯಾದದ್ದು ಈ ವರೆಗೆ ಸುದ್ದಿಯಾಗುತ್ತಿತ್ತು. ಈಗ ಜಪಾನ್‌ ರಾಜಕುಮಾರಿ ಸಾಮಾನ್ಯ ಕೌಟುಂಬಿಕ ಹಿನ್ನೆಲೆಯ ವ್ಯಕ್ತಿಯನ್ನು ಪ್ರೀತಿಸಿ ಅವರನ್ನೇ ವರಿಸುತ್ತಿರುವುದು ಸುದ್ದಿಯಾಗಿದೆ. ಪ್ರೀತಿಸಿದ ವ್ಯಕ್ತಿಗಾಗಿ ರಾಜಕುಮಾರಿ ಅಯಾಕೊ(27) ತನ್ನ ರಾಜಕುಮಾರಿ ಪಟ್ಟವನ್ನೇ ತ್ಯಜಿಸಲು ಸಿದ್ಧರಾಗಿದ್ದಾರೆ.

Advertisement

ಜಪಾನ್‌ನ ರಾಜಮನೆತನದವರು ರಾಜಮನೆತನದವರ ಹೊರತಾಗಿ ಸಾಮಾನ್ಯರನ್ನು ಮದುವೆಯಾದರೆ ರಾಜ ಪದವಿಯನ್ನು ತ್ಯಜಿಸಬೇಕು. ರಾಜಕುಮಾರಿ ಆಯಾಕೊ ಖುಷಿಯಿಂದ ರಾಜಪದವಿ ತ್ಯಜಿಸುವುದಾಗಿ ಹೇಳಿದ್ದಾರೆ. 

ಆಕಿಯೊ ಭಾವಿ ಪತಿ ಕೇಯ್‌ ಮೊರಿಯೊ ಹಡಗಿನಲ್ಲಿ ಕೆಲಸ ಮಾಡುವ ನೌಕರ. ರೆಸ್ಟಾರೆಂಟ್‌ನಲ್ಲಿ  ಊಟ ಮಾಡುವಾಗ ಕೇಯ್‌ ನನಗೆ ಪ್ರೇಮ ನಿವೇದನೆ ಮಾಡಿದರು. ನನಗೆ ನನ್ನ ಕುಟುಂಬವೂ ಮುಖ್ಯವಾದ್ದರಿಂದ ನಾನು ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಅವರನ್ನೇ ಮದುವೆಯಾಗಲು ಒಪ್ಪಿಕೊಂಡೆ ಎಂದಿ ದ್ದಾರೆ. ಟೋಕಿಯೋದಲ್ಲಿರುವ  ಮೇಜಿ ಜಿಂಗು ಮಂದಿರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಲು ಯುವ ಜೋಡಿ ನಿರ್ಧರಿಸಿದೆ.  ಜಪಾನ್‌ನಲ್ಲಿ ರಾಜಮನೆತನದವರು ಇತರ ಸಾಮಾಜದವರನ್ನು ಮದುವೆಯಾ ಗುತ್ತಿರುವುದು ಹೆಚ್ಚಾಗಿರುವ ಕಾರಣ ಈಗ ಜಪಾನ್‌ನಲ್ಲಿ  ಕೇವಲ 18 ರಾಜ ಮನೆತನಗಳು ಮಾತ್ರ ಉಳಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next