Advertisement

Nalanda university; ಇಂದು ಪ್ರಧಾನಿಯಿಂದ ನಳಂದಾ ವಿವಿ ಉದ್ಘಾಟನೆ

11:30 PM Jun 18, 2024 | Team Udayavani |

ಹೊಸದಿಲ್ಲಿ: ಪ್ರಾಚೀನ ಕಾಲದ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾ ವಿಶ್ವ ವಿದ್ಯಾನಿಲಯಕ್ಕೆ ಈಗ ಮತ್ತೆ ಜೀವ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಹಾರದ ರಾಜ ಗೀರ್‌ನಲ್ಲಿ ನಳಂದಾ ವಿವಿಯ ನೂತನ ಕ್ಯಾಂಪಸ್‌ ಉದ್ಘಾಟಿಸಲಿದ್ದಾರೆ. 2010ರಲ್ಲಿ ಸ್ಥಾಪನೆ ಗೊಂಡ ಈ ವಿವಿ ಹೊಸ ರೂಪ ಪಡೆದು ಕೊಂಡಿದೆ. ಸಮಾರಂಭದಲ್ಲಿ ವಿದೇ ಶಾಂಗ ಸಚಿವ ಎಸ್‌. ಜೈಶಂಕರ್‌ ಜತೆಗೆ ಆಸ್ಟ್ರೇಲಿಯಾ ಸೇರಿ 17 ದೇಶಗಳ ರಾಯಭಾರಿಗಳು ಭಾಗಿಯಾಗಲಿದ್ದಾರೆ.

Advertisement

ನೂತನ ವಿವಿ ವಿಶೇಷತೆಗಳು: 1890 ಆಸನಗಳ 40 ಕೊಠಡಿಗಳು, 2 ಆಡಳಿತ ಕಟ್ಟಡ, 300 ಆಸನಗಳ 2 ಸಭಾಂಗಣ, 550 ವಿದ್ಯಾರ್ಥಿಗಳ ಸಾಮರ್ಥ್ಯದ ನಿಲಯ, 197 ಸಿಬಂದಿಗೆ ವಸತಿಗೃಹ, ಅತಿಥಿ ಗೃಹ, ಅಂತಾರಾಷ್ಟ್ರೀಯ ಕೇಂದ್ರ, ಭೋಜನಶಾಲೆ, ದೊಡ್ಡ ಹೊರಾಂಗಣ ಕ್ರೀಡಾ, ವೈದ್ಯಕೀಯ, ವಾಣಿಜ್ಯ ಕೇಂದ್ರ ಕ್ಯಾಂಪಸ್‌ನಲ್ಲಿವೆ. ಸೆಪ್ಟಂಬರ್‌ ವೇಳೆಗೆ 3 ಸಾವಿರ ಪುಸ್ತಕಗಳಿರುವ ಗ್ರಂಥಾಲಯ ನಿರ್ಮಾಣವಾಗಲಿದೆ.

ಪರಿಸರ ಸ್ನೇಹಿ ಕ್ಯಾಂಪಸ್‌: 6.5 ಮೆಗಾವ್ಯಾಟ್‌ ವಿದ್ಯುತ್‌ ಪೂರೈಸುವ ಸೋಲಾರ್‌ ಘಟಕ, 500 ಕೆಎಲ್‌ಡಿಯ ಕುಡಿಯುವ ನೀರಿನ ಘಟಕ, 400 ಕೆಎಲ್‌ಡಿಯ ನೀರು ಶುದ್ಧೀಕರಣ ಘಟಕ, ನೂತನ ಕ್ಯಾಂಪಸ್‌ನಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next