Advertisement

Remembrance Day ದೇಶ ವಿಭಜನೆ: ಹುತಾತ್ಮರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

12:06 AM Aug 15, 2023 | Team Udayavani |

ಹೊಸದಿಲ್ಲಿ: 1947ರ ದೇಶ ವಿಭಜನೆ ಸಂದರ್ಭದಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದರು. ದೇಶ ವಿಭಜನೆ ವೇಳೆ ಉಂಟಾದ ಕೋಮು ಗಲಭೆಯಲ್ಲಿ ಅನೇಕ ಭಾರತೀಯರು ಮೃತರಾದರು.

Advertisement

ಆ ಸಂದರ್ಭದಲ್ಲಿ ಈಗಿನ ಪಾಕಿಸ್ಥಾನದಲ್ಲಿರುವ ಹಿಂದೂಗಳು ಹಾಗೂ ಸಿಕ್ಖ್ರನ್ನು ಬಲವಂತವಾಗಿ ವಲಸೆ ಹೋಗುವಂತೆ ಮಾಡಲಾಯಿತು.ಸಾವಿರಾರು ಜನರನ್ನು ಹತ್ಯೆ ಮಾಡಲಾಯಿತು. ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗ ಲಾಯಿತು. “ದೇಶ ವಿಭಜನೆ ವೇಳೆ ಜೀವ ಕಳೆದುಕೊಂಡ ಭಾರತೀಯರನ್ನು ಪೂಜ್ಯ ಭಾವದಿಂದ ಸ್ಮರಿಸುವ ದಿನವೇ “ವಿಭಜನೆಯ ಕರಾಳತೆಯ ಸಂಸ್ಮರಣ ದಿನ’ವಾಗಿದೆ. ಬಲವಂತವಾಗಿ ವಲಸೆ ಬಂದವರ ದುಃಖ ಹಾಗೂ ಕಷ್ಟವನ್ನು ಸ್ಮರಿಸುವ ದಿನ. ಅಂತಹ ಎಲ್ಲರಿಗೂ ನಮಸ್ಕರಿಸುತ್ತೇನೆ’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡಿದ್ದು ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. 1947ರ ಭಯಾನಕ ಆಘಾತದ ಪರಿಣಾಮವನ್ನು ಅನೇಕ ಜನರು ಈಗಲೂ ಅನುಭವಿಸುತ್ತಿ¨ªಾರೆ ಎಂದು ಕೇಂದ್ರ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next