Advertisement

ಪ್ರತಿಪಕ್ಷಗಳ ಧೋರಣೆ ಖಂಡಿಸಿ ಮೋದಿ ಉಪವಾಸ;ಸಂಸದರ ಸಾಥ್‌ 

10:49 AM Apr 12, 2018 | |

ಹೊಸದಿಲ್ಲಿ: ಸಂಸತ್‌  ಸುಗಮ ಕಲಾಪ ನಡೆಸಲು ವಿಪಕ್ಷಗಳು ಅಡ್ಡಿಪಡಿಸುತ್ತಿವೆ ಮಾತ್ರವಲ್ಲದೆ ಸರ್ಕಾರದ ವಿರುದ್ಧ ಕೆಲ ವರ್ಗದ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರಧಾನಿ ಯವರ ಗಾಂಧಿ ತತ್ವದ ಹೋರಾಟಕ್ಕೆ ಕೇಂದ್ರ ಸಚಿವರು ಮತ್ತು ಸಂಸದರು ಸಾಥ್‌ ನೀಡಿದ್ದು ಅವರವರ ಕ್ಷೇತ್ರಗಳಲ್ಲಿ ಉಪವಾಸ ನಿರತರಾಗಿದ್ದಾರೆ. 

Advertisement

‘ಬಜೆಟ್‌ ಅಧಿವೇಶನದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದವರ ವಿರುದ್ಧ ಸತ್ಯಾಗ್ರಹ ನಡೆಸುತ್ತಿದ್ದೇವೆ’ ಎಂದು ಪ್ರಧಾನಿ  ಮೋದಿ ಹೇಳಿದ್ದಾರೆ. 

ತಮಿಳು ನಾಡು ಪ್ರವಾಸದಲ್ಲಿ ಪ್ರಧಾನಿ ಮೋದಿ 
ಪ್ರಧಾನಿ ಮೋದಿ ಅವರು ಚೆನ್ನೈ ಪ್ರವಾಸದಲ್ಲಿದ್ದು ವಿಮಾನ ನಿಲ್ದಾಣಕ್ಕಾಗಮಿಸಿದ ಪ್ರಧಾನಿ ಅವರಿಗೆ ಸಿಎಂ ಪಳನಿ ಸ್ವಾಮಿ, ಡಿಸಿಎಂ ಪನ್ನೀರ್‌ ಸೆಲ್ವಂ ಅವರು ಸ್ವಾಗತ ನೀಡಿದರು.

ವಿಮಾನ ನಿಲ್ದಾಣದ ಹೊರಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕೆಲ ಸಂಘಟನೆಗಳ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ಆಹಾರ ಸೇವಿಸದೆ ತಮ್ಮ ಎಂದಿನ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಅನಾರೋಗ್ಯವಿರುವ ಸಂಸದರು ಉಪವಾಸ ಸತ್ಯಾಗ್ರಹ ನಡೆಸುತ್ತಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. 

Advertisement

ಹುಬ್ಬಳ್ಳಿಯಲ್ಲಿ ಶಾ 

ಬಿಜೆಪಿ  ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಹುಬ್ಬಳ್ಳಿ ಪ್ರವಾಸದಲ್ಲಿದ್ದು ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುವ ಸತ್ಯಾಗ್ರಹದಲ್ಲಿ ಅವರು ಪಾಲ್ಗೊಳ್ಳಲಿದ್ದು, ಸಂಸದ ಪ್ರಹ್ಲಾದ್‌ ಜೋಷಿ  ಅವರು ಜೊತೆಯಲ್ಲಿದ್ದಾರೆ. 

ಬೆಂಗಳೂರಿನಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತ್‌ ಕುಮಾರ್‌  ಮತ್ತು ಸಂಸದ ಪಿ.ಸಿ.ಮೋಹನ್‌ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಜೊತೆಯಲ್ಲಿ ಕುಳಿತಿದ್ದಾರೆ. ರಾಜ್ಯದ ಇತರ ಬಿಜೆಪಿ ಸಂಸದರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 

ಕಟ್ಟಪ್ಪಣೆ 

ಯಾವುದೇ ಕಾರಣಕ್ಕೂ ಉಪವಾಸ ನಿರತ ಸಂಸದರು, ಸಚಿವರು ಆಹಾರ ಸೇವಿಸಲು ಮುಂದಾಗ ಬಾರದು ಎಂದು ಬಿಜೆಪಿ ಕಟ್ಟಪ್ಪಣೆ ಹೊರಡಿಸಿದೆ. ಕಳೆದ ಸೋಮವಾರ ರಾಹುಲ್‌ ಗಾಂಧಿ ನೇತೃತ್ವದಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಕಾಂಗ್ರೆಸ್‌ ಸಂಸದರು ಉಪವಾಸ ಸತ್ಯಾಗ್ರಹ ಪ್ರತಿಭಟನೆ ನಡೆಸಿದ್ದರು. ಉಪವಾಸ ನಿರತ ಕಾಂಗ್ರೆಸ್‌ ಸಂಸದರು ಆಹಾರ ಸೇವಿಸುತ್ತಿದ್ದ ಫೋಟೋಗಳು ವೈರಲ್‌ ಆಗಿತ್ತು.  ಎಐಎಡಿಎಂಕೆ ಮುಖಂಡರು ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಉಪವಾಸ ಸತ್ಯಾಗ್ರಹ  ಪ್ರತಿಭಟನೆ ನಡೆಸಿದ ವೇಳೆ ಬಿರಿಯಾನಿ ತಿಂದ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next