Advertisement
ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾರತ್ ಮಾತಾ ಕೀ ಜೈ … ಎಂದು ಭಾಷಣ ಆರಂಭಿಸಿದ ಮೋದಿ .. ‘ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡ , ಮಹಾತ್ಮ ಬಸವೇಶ್ವರ , ಶರಣ ಮಾದಾರ ಚೆನ್ನಯ್ಯ, ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಮಹಾನ್ ನಾಡು ಕರ್ನಾಟಕ. ನವ ಕರ್ನಾಟಕ ನಿರ್ಮಾಣದಲ್ಲಿ ಪರಿವರ್ತನೆ ಮಾಡಿ ಬಿಜೆಪಿ ಗೆಲ್ಲಿಸಿ’ ಎಂದು ಕನ್ನಡದಲ್ಲೇ ಮಾತನಾಡಿದರು.
Related Articles
Advertisement
ಶ್ರೀಮಂತರಿಗೆ ಎಲ್ಲಾ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ಆದರೆ ಬಡವರು ಜೀವನ ಪೂರ್ತಿ ಇದಕ್ಕಾಗಿ ಶ್ರಮಿಸಬೇಕಾಗುತ್ತದೆ.
ಕೇಂದ್ರ ಸರ್ಕಾರ ಕಳೆದ 3.5 ವರ್ಷಗಳಲ್ಲಿ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ನಿಮಗೆ ತಲುಪಿಸಿಲ್ಲ .ಅನುದಾನ ಬಳಕೆಯಾಗಿರುವ ಬಗ್ಗೆ ಯಾವುದಾದರೂ ಸಾಕ್ಷ್ಯ ಇದೆಯಾ ಎಂದರು.
ಅದೆಷ್ಟೋ ಜನರು ಜೀವನದಲ್ಲಿ ಬೆಳಕನ್ನೇ ಕಾಣದೆ ಹೋಗಿದ್ದಾರೆ. ಅಂತಹವರ ಜೀವನದಲ್ಲಿ ಬೆಳಕು ತುಂಬುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ ಎಂದರು.
ಮೊದಲ ಸರ್ಕಾರಗಳು ದೇಶದ ರೈತರಿಗೆ ಯೂರಿಯಾಗಾಗಿ ಲಾಠಿ ಏಟು ತಿನ್ನಬೇಕಾಗಿತ್ತು, ಪರದಾಡಬೇಕಾಗಿತ್ತು. ನಮ್ಮ ಸರ್ಕಾರ ರೈತರನ್ನು ಸಂಕಷ್ಟದಿಂದ ದೂರ ಮಾಡಲು ”ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನಾ” ಆರಂಭಿಸಿದೆವು. ”ಪ್ರಧಾನ್ ಮಂತ್ರಿ ಸಿಂಚಾಯಿ” ಯೋಜನೆ ತಂದೆವು. ರೈತರ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದರು.
ಕರ್ನಾಟಕ ಹತ್ಯೆಗಳ ರಾಜ್ಯವಾಗುತ್ತಿದೆ.ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗುತ್ತಿದೆ. ಇದಕ್ಕೆ ಉತ್ತರ ಮತದಾನದ ಮೂಲಕ ನೀಡಬೇಕಾಗಿದೆ ಎಂದರು.
ಕರ್ನಾಟಕದಲ್ಲಿ ನಂಗಾ ನಾಚ್ ನಡೆಯುತ್ತಿದೆ. ಸ್ಟೀಲ್ ಬ್ರಿಡ್‌ಜ್ ಹೆಸರಿನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಕೋಟ್ಯಂತರ ರೂಪಾಯಿ ನುಂಗಲು ಮುಂದಾಗಿದ್ದರು. ಬಿಜೆಪಿ ಹೋರಾಟ, ಬೆಂಗಳೂರಿಗರ ವಿರೋಧದಿಂದ ಇದು ನಿಂತಿತು ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಹಲವು ಸಚಿವರ ಮೇಲೆ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರದ ಹೊಸ ಅಧ್ಯಾಯ ಈ ಸರ್ಕಾರ ಶುರು ಮಾಡಿದೆ ಎಂದು ಕಿಡಿ ಕಾರಿದರು.
ಕರ್ನಾಟಕ ಹತ್ಯೆಗಳ ರಾಜ್ಯವಾಗುತ್ತಿದೆ.ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈಯಲಾಗುತ್ತಿದೆ. ಇದಕ್ಕೆ ಉತ್ತರ ಮತದಾನದ ಮೂಲಕ ನೀಡಬೇಕಾಗಿದೆ.ಭ್ರಷ್ಟ ಸರ್ಕಾರವನ್ನು ಕಿತ್ತೂಗೆಯಿರಿ ಎಂದರು.
ದೇಶದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ದೊಡ್ಡದು. ಇಡೀ ದೇಶದ ಜನತೆ ಕರ್ನಾಟಕದ ಬಗ್ಗೆ ಗೌರವ ಹೊಂದಿದ್ದಾರೆ ಎಂದರು.
ಅಂಡರ್ 19 ವಿಶ್ವಕಪ್ ಗೆದ್ದಿದೆ. ಆ ಹುಡುಗರಿಗೆ ಕನ್ನಡಿಗ ರಾಹುಲ್ ದ್ರಾವಿಡ್ ತರಬೇತಿ ನೀಡಿದ್ದಾರೆ . ಅವರ ಕೊಡುಗೆ ಬಹಳ ದೊಡ್ಡದಿದೆ ಎಂದರು.