Advertisement

ಮುಂದಿನ ಪೀಳಿಗೆಗಾಗಿ ನವಭಾರತದ ನಿರ್ಮಾಣ :ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

08:42 AM Aug 15, 2022 | Team Udayavani |

ನವದೆಹಲಿ: ದೇಶಾದ್ಯಂತ ಮನೆಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪುಕೋಟೆಯ ಮೇಲೆ ಸತತ 9ನೇ ಬಾರಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.

Advertisement

ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ. ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ. ಸ್ವಾತಂತ್ರ್ಯ ಎಲ್ಲರ ಹಕ್ಕು. ಎಲ್ಲರಿಗೂ ಸೇರಿದ ಈ ಸ್ವಾತಂತ್ರ್ಯ ಲಭಿಸಲು ಅನೇಕ ಮಹನೀಯರ ಕೊಡುಗೆ ಇದೆ. ಜೊತೆಗೆ ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ.

ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಸೇರಿದಂತೆ ಹಲವರ ಅಂದಿನ ಪರಿಶ್ರಮ ಇಂದಿನ ಭವಿಷ್ಯ ಭಾರತವನ್ನು ರೂಪಿಸುತ್ತಿದೆ.

”ಭಾರತವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ದೇಶಾದ್ಯಂತ 75 ವರ್ಷಗಳ ಸ್ವಾತಂತ್ರ್ಯದ ಕುರಿತು ನಮ್ಮ ಚರ್ಚೆಯನ್ನು ಪ್ರಾರಂಭಿಸಿದ್ದೇವೆ. ನಾವು ಮುಂದಿನ ಬಾರಿ ಭೇಟಿಯಾದಾಗ, ನಮ್ಮ ಮುಂದಿನ 25 ವರ್ಷಗಳ ಪ್ರಯಾಣವು ಈಗಾಗಲೇ ಪ್ರಾರಂಭವಾಗಲಿದೆ, ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ” ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಮೂಲಕ ದೇಶದ ಜನತೆ ಕರೆ ನೀಡಿದ್ದು, ದೇಶದೆಲ್ಲೆಡೆ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದರು.

ಮುಂದಿನ ಪೀಳಿಗೆಗಾಗಿ ನವಭಾರತ ನಿರ್ಮಾಣದ ಅವಶ್ಯಕತೆ ಇದೆ ಅದಕ್ಕೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

Advertisement

ನಮ್ಮ ಆದಿವಾಸಿ ಸಮಾಜವನ್ನೂ ಗೌರವಿಸಬೇಕು, ಆದಿವಾಸಿ ಬಾಂಧವರಲ್ಲಿ ದೇಶಭಕ್ತಿ ಸಮ್ಮಿಲಿತವಾಗಿದೆ. ಹಲವು ಮಹಾಪುರುಷರು ದೇಶಕ್ಕಾಗಿ ದುಡಿದಿದ್ದಾರೆ, ಎಲ್ಲಾ ಮಹಾಪುರುಷರಿಗೆ ನೆನಪಿಸಿಕೊಳ್ಳುವ ಸಮಯ ಬಂದಿದೆ.

75 ವರ್ಷಗಳ ನಮ್ಮ ಯಾತ್ರೆ ಹಲವು ಏರಿಳಿತ ಕಂಡಿದೆ. ಸುಖ-ದುಖಃದ ಛಾಯೆಯೂ ಬಂದು ಹೋಗಿದೆ ದೇಶ ಎಂದಿಗೂ ಸೋಲನ್ನು ಒಪ್ಪಿಕೊಂಡಿಲ್ಲ, ಸಂಕಲ್ಪಗಳು ಮರೆಯಾಗಲು ಬಿಟ್ಟಿಲ್ಲ. ಶತಮಾನಗಳ ಗುಲಾಮಗಿರಿ ನಂತರವೂ ಎದ್ದುನಿಂತಿದೆ.

ರಾಣಿ ಚೆನ್ನಮ್ಮ,ದುರ್ಗಾ ಭಾಬಿ, ರಾಣಿ ಲಕ್ಷ್ಮೀ ಬಾಯಿ, ಬೇಗಂ ಹಜ್ರತ್ ಮಹಲ್​ರಂಥವರು ದೇಶದ ನಾರಿಶಕ್ತಿ ಸ್ವಾತಂತ್ರ್ಯದ ಹೋರಾಟ ಮಾಡಿದವರಿಗೆ ನಮನ, ಸ್ವಾತಂತ್ರ್ಯದ ನಂತರ ದೇಶ ನಿರ್ಮಿಸಿದವರಿಗೆ ನಮನ. ನೆಹರು, ಶಾಸ್ತ್ರಿ, ವಿನೋಬಾ ಭಾವೆ, ಅಸಂಖ್ಯ ಮಹಾಪುರುಷರು, ದೇಶ ನಿರ್ಮಿಸಿದ ಮಹಾಪುರುಷರಿಗೆ ಇಂದು ನಮಿಸುವ ಸಮಯ ಎಂದರು.

ಪಂಚಪ್ರಾಣ ಸಂಕಲ್ಪ ಪಠಿಸಿದ ಪ್ರಧಾನಿ
ಮುಂದಿನ 25 ವರ್ಷಗಳವರೆಗೆ ಐದು ಹೊಸ ಸಂಕಲ್ಪದೊಂದಿಗೆ ಮುನ್ನಡೆಯೋಣ ಎಂದು ಹೇಳಿದ ಪ್ರಧಾನಿ ಮೋದಿ ತಮ್ಮ ಭಾಷಣದ ಪ್ರಮುಖ ಅಂಶವಾಗಿ ಪಂಚಪ್ರಾಣ ಸಂಕಲ್ಪವನ್ನು ಮಾಡಿದರು.
– 2047ರ ವೇಳೆಗೆ ದೇಶದ ಸಮಗ್ರ ಅಭಿವೃದ್ಧಿ.
– ಗುಲಾಮಿ ವ್ಯವಸ್ಥೆಯನ್ನು ಸಂಪೂರ್ಣ ತೊಡೆದು ಹಾಕುವುದು.
– ದೇಶದ ಬಗ್ಗೆ ಹಮ್ಮೆ ಮತ್ತು ಗೌರವ ಹೊಂದುವುದು.
– 130 ಕೋಟಿ ದೇಶದ ಜನತೆಯಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಮೂಡಿಸುವು.
– ಪ್ರಧಾನಿ, ಮುಖ್ಯಮಂತ್ರಿ ಸೇರಿ ದೇಶದ ನಾಗರಿಕರು ತಮ್ಮ ಕರ್ತವ್ಯವನ್ನು ನಿಭಾಯಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next