Advertisement

ಕೋವಿಡ್ ಲಸಿಕೆಯ ಯಶಸ್ಸು ಭಾರತದ ಸಾಮರ್ಥ್ಯ ತೋರಿಸಿದೆ : ಪ್ರಧಾನಿ ಮೋದಿ

11:59 AM Oct 24, 2021 | Team Udayavani |

ಹೊಸದಿಲ್ಲಿ : ‘100 ಕೋಟಿ ಲಸಿಕೆ ಪೂರೈಸಿರುವುದು ಭಾರತದ ಸಾಮರ್ಥ್ಯ ತೋರಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ.

Advertisement

ಜನಪ್ರಿಯ ರೆಡಿಯೋ ಕಾರ್ಯಕ್ರಮವಾಗಿರುವ ‘ಮನ್ ಕೀ ಬಾತ್ ” ನ 82ನೇ ಕಾರ್ಯಕ್ರಮದಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದ ಲಸಿಕೆ ಶತಕಕ್ಕೆ ಕಾರಣವಾದ ಲಸಿಕೆ ತಯಾರಕರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಪ್ರಕ್ರಿಯೆಗಳ ಸರಿಯಾದ ಸಾಂಸ್ಥಿಕೀಕರಣದ ಅಗತ್ಯವನ್ನು ಅವರು ಒತ್ತಿ ಹೇಳಿದರು.

”ಸರ್ದಾರ್ ಪಟೇಲ್ ಅವರ ಜೀವನ ಮತ್ತು ಆಲೋಚನೆಗಳಿಂದ ನಾವು ಬಹಳಷ್ಟು ಕಲಿಯಬಹುದಾಗಿದೆ.ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇತ್ತೀಚೆಗೆ ಸರ್ದಾರ್ ಪಟೇಲ್ ಅವರ ಜೀವನ ಚರಿತ್ರೆಯನ್ನು ಪ್ರಕಟಿಸಿದೆ. ನನ್ನ ಯುವ ಸ್ನೇಹಿತರು ಇದನ್ನು ಖಂಡಿತವಾಗಿ ಓದಬೇಕೆಂದು ನಾನು ಬಯಸುತ್ತೇನೆ” ಎಂದರು.

”ಮುಂದಿನ ತಿಂಗಳು, ಭಾರತ ಭಗವಾನ್ ಬಿರ್ಸಾ ಮುಂಡಾ ಜಯಂತಿಯನ್ನು ಆಚರಿಸುತ್ತಿದ್ದೇವೆ. ಅವರ ಜೀವನವು ನಮಗೆ ಹಲವಾರು ವಿಷಯಗಳನ್ನು ಕಲಿಸಿದೆ. ಸ್ವಂತ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವುದು, ಪರಿಸರ ಕಾಳಜಿ ಮತ್ತು ಅನ್ಯಾಯದ ವಿರುದ್ಧ ಹೋರಾಡುವುದಕ್ಕೆ ಅವರು ಮಾದರಿ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next