Advertisement
ಈ ಉದ್ದೇಶಕ್ಕಾಗಿ ‘ಆತ್ಮ ನಿರ್ಭರ ಭಾರತ ಅಬಿಯಾನ’ದಡಿಯಲ್ಲಿ ಘೋಷಿತ ಆರ್ಥಿಕ ಪ್ಯಾಕೇಜ್ ನಲ್ಲಿ ಪ್ರಕಟಿಸಲಾಗಿದ್ದ 50 ಸಾವಿರ ಕೋಟಿ ರೂಪಾಯಿಳ ಬೃಹತ್ ‘ಗರೀಬ್ ಕಲ್ಯಾಣ ರೋಜ್ ಗಾರ್ ಯೋಜನೆ’ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ.
Related Articles
Advertisement
‘ನಿಮ್ಮ ಭಾವನೆ ಹಾಗೂ ಅವಶ್ಯಕತೆಗಳನ್ನು ಈ ದೇಶವು ಅರ್ಥಮಾಡಿಕೊಳ್ಳುತ್ತದೆ. ಮತ್ತು ಈ ಅವಶ್ಯಕತೆ ಹಾಗೂ ಭಾವನೆಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನ ಇದೀಗ ಬಿಹಾರದ ಖಗಾರಿಯಾ ಜಿಲ್ಲೆಯಿಂದ ಪ್ರಾರಂಭಗೊಳ್ಳುತ್ತಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಅಭಿಯಾನಕ್ಕೆ ಚಾಲನೆ ನೀಡುತ್ತಾ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿಯವರು ವಿವಿಧ ರಾಜ್ಯಗಳಿಗೆ ವಲಸೆ ಹೋಗಿದ್ದು ಇದೀಗ ಲಾಕ್ ಡೌನ್ ಕಾರಣದಿಂದ ತಮ್ಮ ಸ್ವಂತ ರಾಜ್ಯ ಬಿಹಾರಕ್ಕೆ ವಾಪಾಸಾಗಿರುವ ಹಲವು ವಲಸೆ ಕಾರ್ಮಿಕರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಲ್ಲೇ ಮಾತನಾಡಿದರು.
ಈ ಲಾಕ್ ಡೌನ್ ಬಳಿಕ ಸುಮಾರು 30 ಲಕ್ಷಕ್ಕೂ ಅಧಿಕ ಬಿಹಾರ ರಾಜ್ಯದ ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಾಸಾಗಿದ್ದರು.
ಈ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹಿತ ಹಲವರು ಉಪಸ್ಥಿತರಿದ್ದರು.