Advertisement

ಪ್ರಧಾನಿ ಮೋದಿ ರೋಡ್ ಶೋಗೆ ಸಕಲ ಸಿದ್ಧತೆ: ಭಾರೀ ಪೊಲೀಸ್ ಬಂದೋಬಸ್ತ್

01:17 PM May 02, 2023 | Team Udayavani |

ಕಲಬುರಗಿ: ರಾಜ್ಯದ ವಿಧಾನಸಭೆ ಚುನಾವಣೆಯ ಪ್ರಯುಕ್ತ ಇಂದು ಕಲಬುರಗಿ ನಗರದಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋಗಾಗಿ ಎಲ್ಲಾ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ರೋಡ್ ಶೋ ನಡೆಯುವ 6 ಕಿ.ಮೀ ರಸ್ತೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Advertisement

ಪ್ರಮುಖ ರಸ್ತೆಗೆ ಬಂದು ಸೇರುವ ಎಲ್ಲ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇದರಿಂದ ಬೆಳಗಿನ ಜಾವ ಕಚೇರಿ ಮತ್ತು ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೆ ಮತ್ತು ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೂ ಪ್ರಧಾನಮಂತ್ರಿ ಮೋದಿ ಬರುವ ಹಿನ್ನೆಲೆಯಲ್ಲಿ ಇಂತಹ ಕೆಲವು ಅಡೆತಡೆಗಳಿಗೆ ಜನರೇ ಸಾತ್ ನೀಡುತ್ತಿರುವುದು ಅಲ್ಲಲ್ಲಿ ಕಂಡು ಬಂತು. ನಗರದ ಕೆಎಂಎಫ್ ಇಂದ ಶುರುವಾಗುವ ರೋಡ್ ಶೋ ಅಂತಿಮವಾಗಿ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತಕ್ಕೆ ಆಗಮಿಸಿ ಅಂತ್ಯಗೊಳ್ಳಲಿದೆ.

ಈ ರಸ್ತೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕೃತಕ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಜನ ಸಂಚಾರ ವಿರಳಗೊಂಡಿದೆ. ಸ್ಥಳೀಯ ಪೊಲೀಸ್ ತಂಡ ಮತ್ತು ಹೋಂ ಗಾರ್ಡ್ ಎಲ್ಲವನ್ನು ಬಳಕೆ ಮಾಡಿಕೊಂಡು ಮಾಡಲಾಗಿದೆ. ಎಸ್ಪಿ ಉಷಾ ಪಂತ್, ಕಮಿಷನರ್ ಆರ್. ಚೇತನ್ ಸೇರಿದಂತೆ ಬದ್ಧತೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ರೋಡ್ ಶೋ ನಡೆಯುವ ಒಟ್ಟು ಆರು ಕಿಲೋಮೀಟರ್ ಉದ್ದದ ವ್ಯವಸ್ಥೆಯನ್ನು ಬೆಳಗ್ಗೆಯಿಂದಲೇ ತಪಾಸಣೆ ಮಾಡುತ್ತಿದ್ದಾರೆ.

ರೋಡ್ ಶೋ ನಡೆಯಲಿರುವ 6 ಕಿ.ಮೀ ರಸ್ತೆ ಯುದ್ಧಕ್ಕೂ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಬಂದ್ಮಾಡಲಾಗಿದ್ದು ಆ ಇಡೀ ಪ್ರದೇಶ ಕೇಂದ್ರ ಮೀಸಲು ಪಡೆ ಹಾಗೂ ಎಸ್‌ಜಿಪಿ ನಿಗರಾಣಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next