Advertisement
ಪ್ರಧಾನ ಮಂತ್ರಿ ನರೇಂದ್ರ ಮೋದಿ 2019ರ ಲೋಕಸಭೆ ಚುನಾವಣೆಗೂ ಮೊದಲು ತಮ್ಮ ಸರ್ಕಾರದ ಮೊದಲ ಅವಧಿಯ ಕೊನೆಯ ಬಜೆಟ್‌ನಲ್ಲಿ ದೇಶದ ಎಲ್ಲ ರೈತರಿಗೂ ವಾರ್ಷಿಕ 6 ಸಾವಿರ ರೂ.ನೀಡುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯನ್ನು ಘೊಷಣೆ ಮಾಡಿದರು. ಅದರಂತೆ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂ.ನಂತೆ ವರ್ಷದಲ್ಲಿ ಮೂರು ಕಂತಿನಲ್ಲಿ ಹಣ ನೀಡಲಿದೆ. ಪ್ರತಿ ರೈತರಿಗೂ ವಾರ್ಷಿಕ ಆರು ಸಾವಿರ ರೂ.ವನ್ನು 3 ಕಂತಿನಲ್ಲಿ ನೀಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಬಿಡುಗಡೆ ಮಾಡುವ ಮೂರು ಕಂತಿನ ಹಣ ಬಿಡುಗಡೆಯಾಗಿದ್ದು, ಆದರೆ, ರಾಜ್ಯದ ಬಹುತೇಕ ರೈತರಿಗೆ ಮಾತ್ರ ತಲುಪಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
Related Articles
Advertisement
ಕೆಲವು ರೈತರಿಗೆ ಈಗಾಗಲೇ ಮೂರು ಕಂತಿನ ಹಣ ಜಮೆಯಾಗಿದ್ದು, ಕೇಂದ್ರ ಸರ್ಕಾರದ ಪಾಲಿನ ಎರಡು ಕಂತಿನ ನಾಲ್ಕು ಸಾವಿರ ಹಾಗೂ ರಾಜ್ಯ ಸರ್ಕಾರದ ಒಂದು ಕಂತಿನ ಎರಡು ಸಾವಿರ ರೂ. ಜಮೆಯಾಗಿದೆ. ಆದರೆ, ಒಮ್ಮೆ ದಾಖಲೆ ಸಲ್ಲಿಸಿದ ರೈತರಿಗೆ ಏಕಕಾಲಕ್ಕೆ ಹಣ ಜಮೆಯಾಗದೇ ಇರುವುದು ಸರ್ಕಾರದ ನಡವಳಿಕೆಯ ಬಗ್ಗೆ ರೈತರಿಗೆ ಅನುಮಾನ ಮೂಡುವಂತೆ ಮಾಡಿದೆ. ಪ್ರತಿ ಕಂತಿನ ಹಣ ಬಿಡುಗಡೆ ಮಾಡುವಾಗ ರೈತರ ಸಂಖ್ಯೆ ವ್ಯತ್ಯಾಸವಾಗಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ.
ಸಾಲಮನ್ನಾ ರೈತರೂಮತ್ತೆ ಅರ್ಜಿ ಸಲ್ಲಿಸಬೇಕು: ಮೈತ್ರಿ ಸರ್ಕಾರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿ, ಅದರ ಲಾಭ ಪಡೆಯಲು ರೈತರಿಂದ ಪಹಣಿ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಅದರಂತೆ ಸುಮಾರು 45 ಲಕ್ಷ ರೈತರು ಸಾಲ ಮನ್ನಾ ಯೋಜನೆಗೆ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆ ಹಾಗೂ ಜಮೀನು ಹೊಂದಿರುವ ಬಗ್ಗೆ ಪಹಣಿ ಪತ್ರಗಳನ್ನು ಸಲ್ಲಿಸಿದ್ದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಮತ್ತೆ ಹೊಸದಾಗಿ ರೈತರು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ರೈತರು ಬ್ಯಾಂಕ್‌ಗೆ ಅಲೆದಾಡುವಂತೆ ಮಾಡಿದೆ.
ಬದಲಾದ ನಿಮಯ: ಆರಂಭರದಲ್ಲಿ ಎಲ್ಲ ರೈತರಿಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅನ್ವಯವಾಗುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಜೂನ್ ತಿಂಗಳಲ್ಲಿ ನಿಯಮಗಳನ್ನು ಬದಲಾಯಿಸಲಾಗಿದ್ದು, ಈ ಯೋಜನೆ ವ್ಯಾಪ್ತಿಗೊಳಪಡಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆಯ ನಿಯಮದ ಪ್ರಕಾರ ತೆರಿಗೆ ಕಟ್ಟುವ, ಕನಿಷ್ಠ 10 ಸಾವಿರ ರೂ. ಪಿಂಚಣಿ ಪಡೆಯುವ, ಸರ್ಕಾರಿ ನೌಕರರಾಗಿರಬಾರದು, ಸಾಂವಿಧಾನಿಕ ಹುದ್ದೆಯಲ್ಲಿರಬಾರದು. ಎಂಜನಿಯರ್, ಲಾಯರ್, ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ರೈತರಾಗಿದ್ದರೂ ಈ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಕೃಷಿ ಸಮ್ಮಾನ್ ಯೋಜನೆ ಫಲಾನುಭವಿಗಳುನೋಂದಾಯಿತ ರೈತರು- 52,53,000
ನೋಂದಾಯಿತರಲ್ಲಿ 1ನೇ ಕಂತಿನ ಹಣ ಪಡೆದವರು- 40,82,153
ನೋಂದಾಯಿತರಲ್ಲಿ 2ನೇ ಕಂತಿನ ಹಣ ಪಡೆದವರು- 33,,70,351
ನೋಂದಾಯಿತರಲ್ಲಿ – 3ನೇ ಕಂತು ಪಡೆದ ರೈತರು- 3,65,754
ರಾಜ್ಯ ಸರ್ಕಾರದ 1ನೇಕಂತು ಪಡೆದ ರೈತರು- 24,45,669 ಯೋಜನೆಯನ್ನು ರೈತರಿಗೆ ಹಂತ ಹಂತವಾಗಿ ತಲುಪಿಸಲಾಗುತ್ತಿದೆ. ದಾಖಲೆ ಸಲ್ಲಿಸಿದರೂ, ರೈತರ ಖಾತೆಗೆ ಹಣ ಜಮೆಯಾಗದಿದ್ದರೆ, ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ತಾವು ಸಲ್ಲಿಸಿರುವ ದಾಖಲೆಗಳು ಸರಿಯಾಗಿವೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬೇಕು. ಎಲ್ಲ ರೈತರಿಗೂ ಈ ಯೋಜನೆ ಲಾಭ ದೊರಕಿಸಿಕೊಡಲಾಗುತ್ತಿದೆ.
-ಬಿ.ವೈ. ಶ್ರೀನಿವಾಸ್, ಕೃಷಿ ನಿರ್ದೇಶಕರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಒಳ್ಳೆಯದೇ. ಕೇಂದ್ರ ಸರ್ಕಾರ ನಿಯಮಿತವಾಗಿ ಹಣ ಬಿಡುಗಡೆ ಮಾಡಬೇಕು. ರಾಜ್ಯದ ಎಲ್ಲ ರೈತರ ದಾಖಲೆಗಳು ಈ ಸ್ವತ್ತು ಪೋರ್ಟಲ್‌ನಲ್ಲಿ ಲಭ್ಯವಿದೆ. ಆದರೆ, ರಾಜ್ಯ ಸರ್ಕಾರ ಮತ್ತೆ ದಾಖಲೆಗಳನ್ನು ಕೇಳುವ ಮೂಲಕ ಅನಗತ್ಯ ವಿಳಂಬ ತಂತ್ರ ಅನುಸರಿಸುತ್ತಿದೆ.
-ಸಚಿನ್ ಮೀಗಾ, ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಕಿಸಾನ್ ಸಮ್ಮಾನ್ ಯೋಜನೆ ಎಲ್ಲ ರೈತರಿಗೂ ಬರುತ್ತಿಲ್ಲ. ಕೆಲವು ರೈತರಿಗೆ ಒಂದು ಕಂತು, ಕೆಲವರಿಗೆ ಎರಡು ಕಂತಿನ ಹಣ ಬಿಡುಗಡೆಯಾಗಿದ್ದು, ಕೆಲವರಿಗೆ ಒಂದು ಕಂತಿನ ಹಣವೂ ಬಂದಿಲ್ಲ. ಇದರಿಂದ ರೈತರಲ್ಲಿ ಗೊಂದಲ ಉಂಟಾಗುವಂತೆ ಮಾಡಿದೆ.
-ಸುಭಾಸ್, ರೈತ ಮುಖಂಡ, ಬಾಗಲಕೋಟೆ * ಶಂಕರ ಪಾಗೋಜಿ