Advertisement
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು, ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ಪ್ರಾಥಮಿಕ ಶಿಕ್ಷಣ ಮಂಡಳಿ ರಚಿಸಬೇಕು, ಕೇಂದ್ರದ 7ನೆಯ ವೇತನ ಆಯೋಗದ ಶಿಫಾರಸುಗಳನ್ನು ಎಲ್ಲ ರಾಜ್ಯಗಳಲ್ಲಿ ತತ್‌ಕ್ಷಣ ಜಾರಿಗೊಳಿಸಬೇಕು, ಎಲ್ಲ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ, ಯುಕೆಜಿ) ಆರಂಭಿಸಬೇಕು, ಸರಕಾರಿ ಶಾಲೆಗಳ ಸಶಕ್ತೀಕರಣಕ್ಕೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರನ್ನು, ಶಿಕ್ಷಕ- ವಿದ್ಯಾರ್ಥಿ ಅನುಪಾತ 1:30, ಶಾಲೆಗೊಬ್ಬ ಮುಖ್ಯ ಶಿಕ್ಷಕರನ್ನು ನೇಮಿಸಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ, ಡಿಡಿಪಿಐ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಿ.ಬಿ., ರಾಜ್ಯ ಉಪಾಧ್ಯಕ್ಷ ಶಶಿಧರ ಶೆಟ್ಟಿ, ಪದಾಧಿಕಾರಿಗಳಾದ ರಮಾನಂದ ಶೆಟ್ಟಿ, ಪ್ರೇಮಾ ಎಂ., ವೆರೊನಿಕಾ ಪಿಂಟೋ, ವಿಜಯಕುಮಾರ್, ಕೃಷ್ಣ ಮೊಲಿ, ಸತೀಶ ಶೆಟ್ಟಿ, ಉಮೇಶ ನಾಯಕ್, ದೇವದಾಸ ಪಾಟ್ಕರ್, ಐವನ್ ಸಂತೋಷ್, ಪ್ರಭಾಕರ ಶೆಟ್ಟಿ, ಸುರೇಶ ಶೆಟ್ಟಿ, ಜನಾರ್ದನ ಬಿಳಿರಾಯ, ಸುಂದರ ಎ., ಗಣೇಶ ಎ., ಸರಕಾರಿ ನೌಕರರ ಸಂಘದ ಪ್ರಶಾಂತ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.