Advertisement

ದೇವಸ್ಥಾನದಿಂದ ಚಿನ್ನಾಭರಣ ಕಳವುಗೈದು ಅರ್ಚಕ ಪರಾರಿ; ಪೊಲೀಸರು ತಿರುವನಂತಪುರಕ್ಕೆ

05:13 PM Nov 04, 2022 | Team Udayavani |

ಉಪ್ಪಳ: ಮಂಜೇಶ್ವರ ಹೊಸಬೆಟ್ಟು ಶ್ರೀ ಮಂಗೇಶ ಮಹಾಲಕ್ಷ್ಮೀ ಶಾಂತಾದುರ್ಗಾ ದೇವಸ್ಥಾನದಿಂದ ಐದೂವರೆ ಪವನ್‌ ಚಿನ್ನದ ಆಭರಣವನ್ನು ಕಳವು ಮಾಡಲಾಗಿದೆ. ಇದೇ ವೇಳೆ ದೇವಸ್ಥಾನದ ಅರ್ಚಕ ತಿರುವನಂತಪುರ ನಿವಾಸಿ ದೀಪಕ್‌ ನಂಬೂದಿರಿ ಪರಾರಿಯಾಗಿದ್ದಾನೆ. ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ಅ. 27ರಂದು ದೀಪಕ್‌ ನಂಬೂದಿರಿಯನ್ನು ಪೂಜೆಗಾಗಿ ದೇವಸ್ಥಾನದಲ್ಲಿ ನೇಮಿಸಲಾಗಿತ್ತು. 29ರಂದು ಸಂಜೆ ಪೂಜೆಯ ಬಳಿಕ ಹೊಸಂಗಡಿ ಪೇಟೆಗೆ ಹೋಗಿ ಬರುವುದಾಗಿ ಕಾವಲುಗಾರನಲ್ಲಿ ತಿಳಿಸಿ ದೀಪಕ್‌ ನಂಬೂದಿರಿ ಹೋಗಿದ್ದ. ಆದರೆ ಆ ಬಳಿಕ ವಾಪಸಾಗಿಲ್ಲ. ಇದರಿಂದ ಆತನಿಗಾಗಿ ಕ್ಷೇತ್ರದ ಮೊಕ್ತೇಸರರು ಫೋನ್‌ ಕರೆ ಮಾಡಿದರೂ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಇದರಿಂದ ಕೇತ್ರದಲ್ಲಿ ಪೂಜೆಗಾಗಿ ಕರ್ನಾಟಕದ ಸಿದ್ದಾಪುರ ನಿವಾಸಿ ಶ್ರೀಧರ ಭಟ್‌ ಅವರನ್ನು ನೇಮಿಸಲಾಗಿತ್ತು. ನ.1ರಂದು ಬೆಳಗ್ಗೆ ಪೂಜೆ ನಡೆಸಲೆಂದುಅವರು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿ ಚಿನ್ನಾಭರಣಗಳು ಹೊಸದರಂತೆ ಕಂಡು ಬಂದಿತ್ತು.

ಈ ಬಗ್ಗೆ ಶ್ರೀಧರ ಭಟ್‌ ಅವರನ್ನು ಮೊಕ್ತೇಸರರು ವಿಚಾರಿಸಿದಾಗ ಹೊಸ ಚಿನ್ನಾಭರಣವಲ್ಲವೆಂದು ತಿಳಿಸಿದ್ದಾರೆ. ಚಿನ್ನಾಭರಣವನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದು ಬಂತು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದು, ತಿರುವನಂತಪುರಕ್ಕೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next