Advertisement
ಎಪಿಎಂಸಿಗಳಲ್ಲೂ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. ಜತೆಗೆ ಹಣ್ಣು ಮತ್ತು ತರಕಾರಿ ಮಳಿಗೆಗಳೂ ದಿನಪೂರ್ತಿ ತೆರೆಯುವಂತಿಲ್ಲ. ಹೊಟೇಲ್, ರೆಸ್ಟೋರೆಂಟ್, ಮದುವೆಯಂಥ ಕಾರ್ಯಕ್ರಮಗಳೂ ಇಲ್ಲ. ಹಾಗಾಗಿ ಖರೀದಿದಾರರಿಲ್ಲದೆ ಟನ್ ಗಟ್ಟಲೆ ತರಕಾರಿ ಮತ್ತು ಹಣ್ಣುಗಳು ಕೊಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಸರಕಾರವೇ ಹಣ್ಣು ಮತ್ತು ತರಕಾರಿ ಖರೀದಿಸಿ ಹಾಪ್‌ಕಾಮ್ಸ್ ಮಳಿಗೆಗಳ ಮೂಲಕ ಜನರಿಗೆ ಮಾರಬೇಕು. ನಂದಿನಿ ಹಾಲಿನ ಮಳಿಗೆಗಳ ರೀತಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ಹಣ್ಣು ಮತ್ತು ತರಕಾರಿ ಅಂಗಡಿಗಳಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಯನ್ನು ರೈತರು ಮುಂದಿಟ್ಟಿದ್ದಾರೆ.
ಬೆಂಗಳೂರು, ಬೆಳಗಾವಿ, ಮೈಸೂರು, ಹಾಸನ, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಮನಗರ, ಕೊಪ್ಪಳ ಸಹಿತ ಹಲವೆಡೆ ಆಲೂಗಡ್ಡೆ, ಟೊಮೆಟೋ, ಕ್ಯಾರೆಟ್, ಬೀನ್ಸ್, ಈರುಳ್ಳಿ, ಎಲೆಕೋಸು, ದಪ್ಪ ಮೆಣಸಿನಕಾಯಿ, ನುಗ್ಗೇಕಾಯಿ ಹಾಗೂ ಹಣ್ಣುಗಳಾದ ಬಾಳೆಹಣ್ಣು, ಪಪ್ಪಾಯ, ಕಲ್ಲಂಗಡಿ, ಕಬೂìಜಾ ಕೊಳೆಯತೊಡಗಿವೆ. ಇದರೊಂದಿಗೆ ಹಲವೆಡೆ ಹೂ ಬೆಳೆಗಳೂ ಹಾಳಾಗುತ್ತಿವೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ :ಜನ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯ ಭೀಕರ: ಈಶ್ವರಪ್ಪ
Related Articles
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಹಲವು ತರಕಾರಿಗಳಿಗೆ ಇತರ ಜಿಲ್ಲೆಗಳನ್ನು ಅವಲಂಬಿಸಿವೆ. ಅಲ್ಲಿಂದ ತರಕಾರಿ ಸಾಗಣೆ ಕಡಿಮೆಯಾದರೆ ಇಲ್ಲಿನ ಗ್ರಾಹಕರ ಜೇಬಿಗೆ ಹೊರೆಯಾಗುತ್ತದೆ. ಕರ್ಫ್ಯೂಗಿಂತ ಮೊದಲು ಕೆಜಿ ಟೊಮೆಟೊ ಗೆ ಬೆಲೆ 20 ರೂ. ಒಳಗಿತ್ತು. ಈಗ ಹಲವೆಡೆ 25 ರೂ. ಹತ್ತಿರವಿದೆ. 20 ರೂ. ವರೆಗೆ ಇಳಿದಿದ್ದ ಈರುಳ್ಳಿ ಬೆಳೆಯೂ ಛಂಗನೆ ನೆಗೆದಿದೆ. ಇದು ಒಂದೆರಡಕ್ಕಲ್ಲ; ಎಲ್ಲ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ.
Advertisement
ಎಪಿಎಂಸಿ ಮಾರುಕಟ್ಟೆಗಳಲ್ಲಿ ಹಣ್ಣು ತರಕಾರಿ ಮಾರಾಟವಾಗದೆ ರೈತರು ಕಷ್ಟಕ್ಕೆ ಸಿಲುಕಿರುವುದು ಸರಕಾರದ ಗಮನಕ್ಕೂ ಬಂದಿದೆ. ಮಾರಾಟದ ಅವಧಿ ವಿಸ್ತರಣೆ ಮಾಡಿದರೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾಗಬಹುದು ಎಂಬ ಆತಂಕವೂ ಇದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಪರಿಹಾರೋಪಾಯ ಕಂಡುಕೊಳ್ಳಲಾಗುವುದು.– ಎಸ್.ಟಿ.ಸೋಮಶೇಖರ್, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ