Advertisement

ಟಿಪ್ಪು ಜಯಂತಿಗೆ ತಡೆ: ಯುವ ಮೋರ್ಚಾ

01:04 PM Oct 29, 2017 | Team Udayavani |

ಉಡುಪಿ, ಅ. 28: ಟಿಪ್ಪುಜಯಂತಿಯನ್ನು ಆಚರಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಟಿಪ್ಪುಜಯಂತಿ ಕಾರ್ಯಕ್ರಮವನ್ನು ಎಲ್ಲ ರೀತಿಯ ಹೋರಾಟದ ಮಾರ್ಗಗಳನ್ನು ಬಳಸಿ ತಡೆಯುತ್ತೇವೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್‌ ತಿಳಿಸಿದ್ದಾರೆ.

Advertisement

ಈ ದೇಶ ನೂರಾರು ಸುಲ್ತಾನರ ಆಕ್ರಮಣಗಳನ್ನು ಎದುರಿಸಿದೆ. ಆದರೆ ಕರಾವಳಿಯ ಹಿಂದೂ ಸಮಾಜವನ್ನು ಇನ್ನಿಲ್ಲದಂತೆ ಕಾಡಿದವರು ಹೈದರಾಲಿ ಮತ್ತು ಟಿಪ್ಪು ಸುಲ್ತಾನ. ಟಿಪ್ಪುವಿನ ಅವಧಿಯಲ್ಲಿ ನಾಶಗೊಂಡ ಅನೇಕ ದೇವಾಲಯಗಳ ಅವಶೇಷಗಳು ಇಂದಿಗೂ ಕಾಣಸಿಗುತ್ತವೆ. ಮಂಗಳೂರಿನ ಸಾವಿರಾರು ಕ್ರೈಸ್ತರನ್ನು ಈತ ಮಾರಣಹೋಮ ಮಾಡಿದ್ದ. 

ಈತನ ಮತಾಂಧತೆ ಮತ್ತು ಸಾಮ್ರಾಜ್ಯದಾಹಕ್ಕೆ ಮಲಬಾರ್‌, ಕೊಡಗು, ಕರ್ನಾಟಕದ ಉತ್ತರ ಭಾಗಗಳಲ್ಲಿ ಲಕ್ಷಾಂತರ ನರಸಂಹಾರ ನಡೆದಿದೆ. ಇದು ಐತಿಹಾಸಿಕ ಸತ್ಯಾವಾಗಿದ್ದರೂ ಇದನ್ನು ಅವಗಣಿಸಿ ಕೇವಲ ಮುಸ್ಲಿಮರ ಮತ ಗಳಿಸುವ ಏಕೈಕ ಉದ್ದೇಶದಿಂದ ಈ ಟಿಪ್ಪುಜಯಂತಿಯನ್ನು ಆಚರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗಳು ಸರಿಯಾಗಿರಬೇಕು ಎಂಬ ಕಾಳಜಿ ಜಿಲ್ಲಾಡಳಿತಕ್ಕೆ ಇದ್ದರೆ ಕಾರ್ಯಕ್ರಮ ಕೈ ಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next