ಆಳಂದ: ಸ್ಥಳೀಯ ಸರ್ಕಾರಿ ಗೋದಾಮಿನಿಂದ ಖಾಸಗಿ ವಾಹನದ ಮೂಲಕ ಪಡಿತರ ಧಾನ್ಯ ಪೂರೈಕೆಗೆ ಮುಂದಾಗಿದ್ದ ಅಧಿಕಾರಿಗಳ ಕ್ರಮಕ್ಕೆ ಶಾಸಕ ಸುಭಾಷ ಗುತ್ತೇದಾರ ಅವರು ಹಠಾತ್ ಭೇಟಿ ನೀಡಿ ತಡೆ ನೀಡಿದ ಪ್ರಸಂಗ ನಡೆದಿದೆ.
ಪಟ್ಟಣದ ಜೂನಿಯರ್ ಕಾಲೇಜಿನ ಮುಂಬಾಗದ ಸರ್ಕಾರಿ ಗೋದಾಮಿಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಕರ್ತರೊಂದಿಗೆ ಎರಡನೇ ಬಾರಿಗೆ ಭೇಟಿ ನೀಡಿದ ಶಾಸಕರು, ಖಾಸಗಿ ವಾಹನದ ಮೂಲಕ ಆಹಾರ ಧಾನ್ಯ ಸರಬರಾಜು ಮಾಡಲು ತಡೆದ ಶಾಸಕರು, ಖಾಸಗಿ ವಾಹನದ ಮೂಲಕ ಏಕೆ ಪೂರೈಸಲಾಗುತ್ತಿದೆ ಎಂದು ಗೋದಾಮಿನ ಅಧಿಕಾರಿಗಳನನ್ನು ತರಾಟೆಗೆ ತೆಗೆದುಕೊಂಡರು.
ಬಡವರಿಗೆ ಸರ್ಕಾರ ವಿತರಿಸುವ ಆಹಾರ ಧಾನ್ಯ ಸೋರಿಕೆಯಾದರೆ ಸಹಿಸುವುದಿಲ್ಲ. ಅಕ್ರಮ ನಡೆಯುವುದಿಲ್ಲ. ಡೀಲರ್‌ಗಳಿಗೆ ತೂಕದಲ್ಲೂ ಕಡಿತವಾಗಬಾರದು. ತೂಕದಲ್ಲಿ ಕಡಿತವಾದರೆ ಗ್ರಾಹಕರಿಗೆ ಕಡಿಮೆ ವಿತರಣೆಯಾಗುತ್ತದೆ. ಅಧಿಕಾರಿಗಳು ಇಂಥ ಕೃತ್ಯ ಕೈಬಿಟ್ಟು ಸಮಪರ್ಕವಾಗಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಈ ಹಿಂದೆಯೂ ಸಹ ನ್ಯಾಯ ಬೆಲೆ ಅಂಗಡಿಗಳಿಗೆ ಸಮಪರ್ಕವಾಗಿ ಆಹಾರಧಾನ್ಯ ಪೂರೈಸುತ್ತಿಲ್ಲ ಎಂಬ ದೂರಿನ ಮೇಲೆ ಎರಡು ತಿಂಗಳ ಹಿಂದೆಯೂ ಶಾಸಕರು ಭೇಟಿ ನೀಡಿದಾಗ ಕಲವಗಾ ಮತ್ತಿತರ ಅಂಗಡಿಗಲ್ಲಿನ ಗ್ರಾಹಕರಿಗೆ ರೇಷನ್ ವಿತರಣೆ ಮಾಡದೆ. ಗೋದಾಮಿನಿಂದ ಮಾಲು ಸರಬರಾಜಗಿದ್ದ ಪ್ರಕರಣ ಪತ್ತೆಯಾಗಿತ್ತು. ಈ ವೇಳೆ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತಹಶೀಲ್ದಾರ್‌ಗೆ ಶಾಸಕರು ಸೂಚಿಸಿದ್ದರು.
ಆದಾಗಿಯೂ ಪರಿಸ್ಥಿತಿ ಸುಧಾರಿಸಿಕೊಳ್ಳದ ಆಹಾರ ಇಲಾಖೆ ಅಧಿಕಾರಿಗಳು ಒಂದಿಲ್ಲ್ಲೊಂದು ಸಂಶಯಾಸ್ಪದ ಎಡವಟ್ಟು ಮಾಡುತ್ತಲೇ ಇರುವ ಬಗ್ಗೆ ದೂರಿನನ್ವಯ ಶಾಸಕರು ಹಠಾತ್ ಭೇಟಿ ನೀಡಿದಾಗ ಖಾಸಗಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ 50 ಕೆಜಿಯ 40 ಚೀಲಗಳನ್ನು ತಡೆಹಿಡಿದು ಜಪ್ತಿ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು. ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ ಅವರು ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಶಾಸಕರು ನಿರ್ಗಮಿಸಿದರು.
ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಮುಖಂಡ ಸೋಮು ಹತ್ತರಕಿ, ರೇಷನ್ ಡೀಲರ್ ಸಂಘದ ಮುಖಂಡ ರಾಜೇಂದ್ರ ಗುಂಡೆ ಇದ್ದರು.