Advertisement

ಬೆಂಗಳೂರು ವಿದ್ಯಾರ್ಥಿಗೆ ಪ್ರತಿಷ್ಠಿತ ‌ಡಯಾನ ಅವಾರ್ಡ್‌

09:41 AM Jun 29, 2021 | Team Udayavani |

ಬೆಂಗಳೂರು: ಮಾನವೀಯ ಸೇವೆಗಾಗಿ ಬೆಂಗಳೂರಿನ ವಿದ್ಯಾರ್ಥಿ ಆಕರ್ಷ್‌ ಶ್ರಾಫ್ ಪ್ರತಿಷ್ಠಿತ “ಡಯಾನ ಅವಾರ್ಡ್‌-2021’ಗೆ ಭಾಜನರಾಗಿದ್ದಾರೆ.

Advertisement

ಬಿಟ್ಸ್‌ ಪಿಲಾನಿಯ ವಿದ್ಯಾರ್ಥಿ ಆಗಿರುವ 20 ವರ್ಷದ ಶ್ರಾಫ್ ಬೆಂಗಳೂರು ಮೂಲದ ಎಸ್‌.ಪಿ.ಎ.ಆರ್‌.ಕೆ ಸ್ವಯಂಸೇವಾ ಸಂಸ್ಥೆ ಮೂಲಕ ಮಾಡಿದ ಸಾಮಾಜಿಕ ಮತ್ತು ಮಾನವೀಯ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಏಳಿಗೆಯಕೆಲಸಗಳಮೂಲಕ5ಸಾವಿರಕ್ಕೂ ಹೆಚ್ಚು ಮಕ್ಕಳ ಮೇಲೆ ಪ್ರಭಾವ ಬೀರಿದ 40 ಲಕ್ಷಕ್ಕೂ ಹೆಚ್ಚು ರೂ. ಹಣ ಸಂಗ್ರಹಿಸಿದ ಹಾಗೂ ಈ ಕಾರ್ಯಕ್ಕೆ 500ಕ್ಕೂ ಹೆಚ್ಚು ಸ್ವಯಂಸೇವಕರನ್ನು ಸಕ್ರಿಯಗೊಳಿಸಿದ ಕಾರಣಕ್ಕೆ ಶ್ರಾಫ್ಅವರಿಗೆ 2021ನೇ ಸಾಲಿನಪ್ರತಿಷ್ಠಿತ ಡಯಾನ ಅವಾರ್ಡ್‌ಗೆ ಗುರುತಿಸಲಾಗಿದೆ.

ಕೋವಿಡ್‌-19 ಸಾಂಕ್ರಾಮಿಕ ಅವಧಿಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ಕಲಿಕೆಗೆ 1.80 ಲಕ್ಷ ಸ್ಕಾಲರ್‌ಶಿಪ್‌ ವ್ಯವಸ್ಥೆ ಮಾಡಿದ್ದಲ್ಲದೇ, ಆನ್‌ಲೈನ್‌ ಕಲಿಕೆಗೆ ಟ್ಯಾಬ್ಲೆಟ್‌ ಮತ್ತು ಲ್ಯಾಪ್‌ಟಾಪ್‌ ಒದಗಿಸುವ ಕೆಲಸ ಮಾಡಿದರು.

ಜೊತೆಗೆ, ಕೋವಿಡ್‌-19 ಮೊದಲ ಅಲೆ ಸಂದರ್ಭದಲ್ಲಿ ವಲಸೆ ಕಾರ್ಮಿಕರುಸೇರಿದಂತೆ 11 ಸಾವಿರ ಫ‌ಲಾನುಭವಿಗಳಿಗೆರೇಷನ್‌ ಕಿಟ್‌ ಹಂಚಿದರು. 2ನೇ ಅಲೆಸಂದರ್ಭದಲ್ಲಿ ವೈದ್ಯಕೀಯ ಮೂಲಸೌಕ ರ್ಯಗಳ ಲಭ್ಯತೆಗೆ ಶ್ರಾಫ್ ಹೆಚ್ಚು ಒತ್ತು ನೀಡಿದರು. ವೆಲ್ಸ್‌ ರಾಣಿ ಡಯಾನ ಸ್ಮರಣಾರ್ಥ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next