Advertisement

ಲಾಳಂದೇನಹಳ್ಳಿ ಗ್ರಾಪಂಗೆ ಅಧ್ಯಕ್ಷರ ಅವಿರೊಧ ಆಯ್ಕೆ 

12:22 PM Mar 23, 2018 | |

ಕೆ.ಆರ್‌.ನಗರ: ತಾಲೂಕಿನ ಲಾಳಂದೇನಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಹೇಮಾವತಿ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 23 ಸದಸ್ಯ ಬಲ ಹೊಂದಿರುವ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಹೇಮಲತಾ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಕಾರಣ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್‌ನ ಆದೇಶದಂತೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷೆಯಾಗಿದ್ದ ಹೇಮಲತಾ ಹೊರತು ಪಡಿಸಿ 22 ಮಂದಿ ಸದಸ್ಯರು ಚುನಾವಣಾ ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿದ್ದ ಹೇಮಲತಾ ಅವರ ವಿರುದ್ಧ ಉಪಾಧ್ಯಕ್ಷೆ ಸಾಕಮ್ಮ ಸೇರಿದಂತೆ ಎಲ್ಲಾ ಸದಸ್ಯರು ಅವಿಶ್ವಾಸ ಮಂಡಿಸಿದ್ದ ಕಾರಣ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೇಮಾವತಿ ಮಂಜುನಾಥ್‌ ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಲಿಲ್ಲ, ಅವಿರೋಧವಾಗಿ ಆಯ್ಕೆಯಾಗಿದ್ದರೂ ಸಹ ಪ್ರಕರಣ ಹೈಕೋರ್ಟ್‌ ಮೆಟ್ಟಿಲು ಏರಿದ್ದರಿಂದ ಕೋರ್ಟ್‌ ಆದೇಶದಂತೆ ಅಧ್ಯಕ್ಷರ‌ ಆಯ್ಕೆಯ ಫ‌ಲಿತಾಂಶವನ್ನು ಘೋಷಣೆ ಮಾಡಲಿಲ್ಲ.

ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಶಿವಸ್ವಾಮಿ, ನೀಲಮ್ಮ, ಶಂಕರ್‌, ಗಣೇಶ್‌, ಶಶಿಕುಮಾರ್‌, ಶಿವಣ್ಣ, ರಾಮಚಂದ್ರ, ಮಂಗಳಗೌರಿ, ಕಮಲಮ್ಮ, ಶಿವಕುಮಾರ್‌, ಪುಟ್ಟರಾಜು, ಚಂದ್ರಮ್ಮ, ಹೆಚ್‌.ಸಿ.ರೋಜಾ, ಲೇತಿನಾಮೇರಿ, ಲಲಿತಮ್ಮ, ಹೇಮಗಿರೀಶ್‌, ಬಿ.ಆರ್‌.ಪುರುಷೋತ್ತವ…, ಉಷಾ, ಮಹಾದೇವಿ, ಜಲೇಂದ್ರ ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುಶಾಂತಪ್ಪ ‌ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷರನ್ನು ಜಿ.ಪಂ. ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಮು, ಎಪಿಎಂಸಿ ಮಾಜಿ ನಿರ್ದೇಶಕ ಎಲ್‌.ಪಿ.ರವಿಕುಮಾರ್‌, ಕಾಂಗ್ರೆಸ್‌ ನಗರಾಧ್ಯಕ್ಷ ಕೆ.ಜಿ.ಸುಬ್ರಮಣ್ಯ, ಕಾಂಗ್ರೆಸ್‌ ಮುಖಂಡರಾದ ಕುಂದೂರುಮಹದೇವ್‌, ಲಿಂಗಪ್ಪ, ನಟರಾಜು, ಮಂಜುನಾಥ್‌, ಮಹೇಶ್‌, ಕೆ.ಆರ್‌.ಚೇತನ್‌, ಇನ್ನಿತರರು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next