Advertisement
ವಿಶೇಷ ವೆಂದರೆ ಈ ಪ್ರಕರಣವು ಕೋವಿಂದ್ ಹಾಲಿ ಹುದ್ದೆ ನಿರ್ವಹಿಸುವುದಕ್ಕೆ ಮುನ್ನ ರಾಜ್ಯ ಪಾಲ ರಾಗಿದ್ದ ಬಿಹಾರಕ್ಕೆ ಸೇರಿದ್ದಾಗಿದೆ. 2013ರಲ್ಲಿ ಸುಪ್ರೀಂಕೋರ್ಟ್ ಬಿಹಾರದ ಜಗತ್ ರಾಯ್‌ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಎತ್ತಿ ಹಿಡಿದಿತ್ತು. ರಾಷ್ಟ್ರಪತಿ ಭವನಕ್ಕೆ ಕ್ಷಮಾದಾನ ಅರ್ಜಿಯನ್ನು ಗೃಹ ಸಚಿವಾಲಯ ಕಳುಹಿಸಿತ್ತಾದರೂ, ಹೊಸ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದರಿಂದ ಪ್ರಣಬ್ ಮುಖರ್ಜಿ ಇದನ್ನು ಪರಿಶೀಲಿಸಿರಲಿಲ್ಲ. ಹೀಗಾಗಿ ಕೋವಿಂದ್ ಈ ಅರ್ಜಿಯನ್ನು ಕೈಗೆತ್ತಿ ಕೊಂ ಡಿದ್ದು, ಕಾನೂನು ಹಾಗೂ ಇತರ ಪರಿಣಿತರ ಜೊತೆ 10 ತಿಂಗಳವರೆಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ. ಎಮ್ಮೆ ಕಳವು ಮಾಡಿದ್ದಾರೆ ಎಂದು ಜಗತ್ ವಿರುದ್ಧ ವಿಜೇಂದ್ರ ಮಹತೋ ದೂರು ನೀಡಿದ್ದಕ್ಕೆ, 2006ರ ಜನವರಿ 1 ರಂದು ಆತನ ಕುಟುಂಬವನ್ನೇ ಜಗತ್ ಜೀವಂತ ಸುಟ್ಟುಹಾಕಿದ್ದ. Advertisement
ಮೊದಲ ಕ್ಷಮಾದಾನ ನಿರಾಕರಿಸಿದ ರಾಷ್ಟ್ರಪತಿ
06:00 AM May 31, 2018 | |
Advertisement
Udayavani is now on Telegram. Click here to join our channel and stay updated with the latest news.