ಚಿಕ್ಕಮಗಳೂರು: ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಶೃಂಗೇರಿಯ ಶಾರದಾಂಬೆ ದರ್ಶನ ಪಡೆಯಲಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶೃಂಗೇರಿಯ ನವರಾತ್ರಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಶಾರದಾಂಬೆ ದರ್ಶನ ಪಡೆದು, ಜಗದ್ಗುರುಗಳ ಆಶೀರ್ವಾದ ಪಡೆಯಲಿದ್ದಾರೆ.
ಬೆಳಗ್ಗೆ 11:30 ರಿಂದ ಸಂಜೆ 3:30 ವರೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶೃಂಗೇರಿಯಲ್ಲಿರಲಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ:ಮತ್ತೊಮ್ಮೆ ಇಂಡೋ ಚೈನಾ ಸಂಘರ್ಷ: ಅ.ಪ್ರದೇಶದಲ್ಲಿ 200 ಚೀನಾ ಸೈನಿಕರನ್ನು ತಡೆದ ಭಾರತೀಯ ಸೈನ್ಯ
ಮಂಗಳೂರಿನಿಂದ 11.30 ಕ್ಕೆ ಶೃಂಗೇರಿಗೆ ಆಗಮಿಸಲಿರುವ ರಾಷ್ಟ್ರಪತಿಯವರು, 12 ಗಂಟೆಗೆ ಶಾರದಾಂಬೆ ದರ್ಶನ ಪಡೆಯಲಿದ್ದಾರೆ. ಒಂದು ಗಂಟೆಗೆ ಶೃಂಗೇರಿ ಶ್ರೀ ಗಳ ಭೇಟಿ, 1.30ಕ್ಕೆ ಊಟ, 2 ಗಂಟೆಗೆ ಸಂಸ್ಕೃತ ಪಾಠಶಾಲೆ ಭೇಟಿ ನಂತರ 3:30 ಕ್ಕೆ ಮಂಗಳೂರು ಮೂಲಕ ದೆಹಲಿಗೆ ರಾಷ್ಟ್ರಪತಿಗಳು ಪಯಣ ಬೆಳೆಸಲಿದ್ದಾರೆ.