Advertisement

President Murmu releases; ಎನ್‌ಟಿಆರ್‌ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ

08:55 PM Aug 28, 2023 | Shreeram Nayak |

ನವದೆಹಲಿ: ತೆಲುಗು ನಟ, ಟಿಡಿಪಿ ಸಂಸ್ಥಾಪಕ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿ.ಎನ್‌.ಟಿ.ರಾಮಾರಾವ್‌ (ಎನ್‌ಟಿಆರ್‌) ಅವರ ಜನ್ಮಶತಮಾನೋತ್ಸವ ಪ್ರಯುಕ್ತ 100 ರೂ. ಮುಖಬೆಲೆಯ ನಾಣ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆಗೊಳಿಸಿದರು.

Advertisement

ನವದೆಹಲಿಯ ರಾಷ್ಟ್ರಪತಿ ಭವನ ಸಾಂಸ್ಕೃತಿಕ ಕೇಂದ್ರದಲ್ಲಿ ನಾಣ್ಯ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಎನ್‌ಟಿಆರ್‌ ಅವರು ತಮ್ಮ ಅದ್ಭುತ ನಟನೆಯಿಂದ ತೆಲುಗು ಚಿತ್ರಗಳ ಮೂಲಕ ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯನ್ನು ಸಂಪತ್ಬರಿತಗೊಳಿಸಿದ್ದಾರೆ’ ಎಂದು ಹೇಳಿದರು.

100 ರೂ. ಮುಖಬೆಲೆಯ ನಾಣ್ಯವು 44 ಮಿ.ಮೀ. ವ್ಯಾಸ ಹೊಂದಿದ್ದು, ಶೇ.50ರಷ್ಟು ಬೆಳ್ಳಿ, ಶೇ.40 ತಾಮ್ರ, ಶೇ.5 ನಿಕಲ್‌ ಮತ್ತು ಶೇ.5 ಝಿಂಕ್‌ನಿಂದ ತಯಾರಿಸಲಾಗಿದೆ. ನಾಣ್ಯದ ಒಂದು ಬದಿಯಲ್ಲಿ ಮೂರು ಸಿಂಹಗಳು ಮತ್ತು ಅಶೋಕ ಚಕ್ರ ಹಾಗೂ ಇನ್ನೊಂದು ಬದಿಯಲ್ಲಿ ಎನ್‌ಟಿಆರ್‌ ಮುಖವನ್ನು ಒಳಗೊಂಡಿದೆ. ಜತೆಗೆ “ನಂದಮೂರಿ ತಾರಕ ರಾಮರಾವ್‌ ಶತ ಜಯಂತಿ’ ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next