ಕೊಲಂಬೊ: ಶ್ರೀಲಂಕಾದಲ್ಲಿ ರಾಜಪಕ್ಸ ವಿರುದ್ಧ ಜನಾಕ್ರೋಶ ಮುಂದುವರಿದಿರುವ ನಡುವೆಯೇ ದ್ವೀಪರಾಷ್ಟ್ರದ ಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸ ಮಾಲ್ಡೀವ್ಸ್ ಗೆ ಪರಾರಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ತುಂಗಾಭದ್ರಾ ನದಿಗೆ ನೀರು: ಕಂಪ್ಲಿ ಸೇತುವೆ ಸಂಚಾರ; ಶ್ರೀಕೃಷ್ಣದೇವರಾಯ ಸಮಾಧಿ ಮುಳುಗಡೆ
ಬುಧವಾರ (ಜುಲೈ 13) ಬೆಳಗ್ಗೆ ಗೊಟಬಯಾ ಮಾಲ್ಡೀವ್ಸ್ ಗೆ ಬಂದಿಳಿದಿದ್ದು, ಈ ಸಂದರ್ಭದಲ್ಲಿ ಮಾಲ್ಡೀವ್ ಸರ್ಕಾರದ ಅಧಿಕಾರಿಗಳು ಗೊಟಬಯಾ ಅವರನ್ನು ಸ್ವಾಗತಿಸಿರುವುದಾಗಿ ವರದಿ ವಿವರಿಸಿದೆ.
ಗೊಟಬಯಾ ರಾಜಪಕ್ಸ ಮಾಲ್ಡೀವ್ಸ್ ಗೆ ಪರಾರಿಯಾಗಿರುವ ಸುದ್ದಿ ಹೊರಬೀಳುತ್ತಿದ್ದಂತೆಯೇ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಮತ್ತೆ ಸಾವಿರಾರು ಜನರು ಬೀದಿಗಿಳಿದಿದ್ದು, ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಜನಸಮೂಹ ನಿಯಂತ್ರಿಸಲು ಸೇನಾಪಡೆ ಅಶ್ರುವಾಯು ಪ್ರಯೋಗಿಸಿರುವುದಾಗಿ ವರದಿ ತಿಳಿಸಿದೆ.
ಗೊಟಬಯಾ ರಾಜಪಕ್ಸ ಅಧಿಕೃತವಾಗಿ ರಾಜೀನಾಮೆ ನೀಡುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ತಿಳಿಸಿದ್ದಾರೆ. ಅಷ್ಟೇ ಅಲ್ಲ ರಾನಿಲ್ ವಿಕ್ರಮಸಿಂಘೆ ಕೂಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.