Advertisement

ಸದನದಲ್ಲಿ ನಾನಾ ವರದಿ ಮಂಡನೆ

11:03 PM Jul 31, 2019 | Lakshmi GovindaRaj |

ವಿಧಾನಸಭೆ: ನೂತನ ವಿಧಾನಸಭಾಧ್ಯಕ್ಷರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ನಾನಾ ಸಮಿತಿಗಳ ಸದಸ್ಯರ ಆಯ್ಕೆಯ ಚುನಾವಣಾ ಪ್ರಸ್ತಾವವನ್ನು ಮಂಡಿಸಿದರು. ನಂತರ, ಅಂದಾಜುಗಳ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಅವರು, 2018-2019ನೇ ಸಾಲಿನ ಮೊದಲ ವರದಿ ಒಪ್ಪಿಸಿದರು. ಸರ್ಕಾರಿ ಭರವಸೆಗಳ ಸಮಿತಿ ಸದಸ್ಯ ಸಿದ್ದು ಸವದಿ ಅವರು ಅಧ್ಯಕ್ಷ ಎ.ಟಿ.ರಾಮಸ್ವಾಮಿಯವರ ಪರವಾಗಿ 2018-19ನೇ ಸಾಲಿನ ನಾಲ್ಕು ಹಾಗೂ ಐದನೇ ವರದಿ ಒಪ್ಪಿಸಿದರು.

Advertisement

ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ ಅವರು, 2018-19ನೇ ಸಾಲಿನ ಮೊದಲ ಹಾಗೂ ಎರಡನೇ ವರದಿ ಒಪ್ಪಿಸಿದರು.ಬಳಿಕ, ಅರ್ಜಿಗಳ ಸಮಿತಿ ಅಧ್ಯಕ್ಷರಾದ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿಯವರು ತಮ್ಮ ಮುಂದಿರುವ ನಾಲ್ಕು ಅರ್ಜಿಗಳನ್ನು ಸದನಕ್ಕೆ ಒಪ್ಪಿಸಿದರು. ನಂತರ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next