ಬೆಂಗಳೂರು: 18ನೇ ಚಿತ್ರಸಂತೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತು ಸಿದ್ಧಗೊಂಡಿದೆ. ಹೊಸ ಸಂದೇಶದೊಂದಿಗೆ ಈ ಬಾರಿಯ ಚಿತ್ರಸಂತೆ ಜ.3ರಂದು ಅನಾವರ ಣಗೊಳ್ಳಲಿದೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಚಿತ್ರ ಕಲಾ ಪರಿಷತ್ತಿನ ಆವರಣವನ್ನು ಚಿತ್ರಕಲಾ ವಿದ್ಯಾರ್ಥಿಗಳು ಭಿನ್ನ ರೀತಿಯಲ್ಲಿ ಸಿಂಗರಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಚಿತ್ರ ಸಂತೆಗಾಗಿಯೇ ಪ್ರತಿ ವರ್ಷ ಚಿತ್ರಕಲಾ ಪರಿಷತ್ತು ಭಿನ್ನ ಸಂದೇಶ ದೊಂದಿಗೆ ಅಣಿಯಾಗಲಿದೆ. ಈ ಬಾರಿ ಕೋವಿಡ್ ವಾರಿಯರ್ಸ್‌ಗೆ ಚಿತ್ರಸಂತೆ ಸಮರ್ಪಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೋವಿಡ್ ವೈರಸ್ ಕುರಿತ ಸಂದೇಶ ಸಾರುವ ಪ್ರತಿಕೃತಿಗಳನ್ನು ರಚಿಸಲಾಗಿದೆ.ಚಿತ್ರಕಲಾ ಪರಿಷತ್ತಿನ ಸುಮಾರು 150 ಮಂದಿ ವಿದ್ಯಾರ್ಥಿಗಳು ಚಿತ್ರ ಸಂತೆ ಆವರಣವನ್ನು ಭಿನ್ನಶೈಲಿಯಲ್ಲಿ ಅಲಂಕರಿಸಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿರುವ ಹಿನ್ನೆಲೆ ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ದೊಡ್ಡ ಮಟ್ಟದಲ್ಲಿ ಚಿತ್ರಸಂತೆ ಆಯೋಜಿಸಿದೆ. ಜ.3 ರಿಂದ 1 ತಿಂಗಳ ಕಾಲ ಸಂತೆ ನಡೆಯಲಿದೆ.
ಇದನ್ನೂ ಓದಿ : ಸೋತಿರುವ ಆಸೀಸ್ ಗೆ ಮತ್ತೊಂದು ಆಘಾತ: ಮೂರನೇ ಪಂದ್ಯದಲ್ಲಿ ಪ್ರಮುಖ ಆಟಗಾರ ಆಡುವುದು ಡೌಟ್!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ಚಿತ್ರಕಲಾ ಪರಿಷತ್ತಿಗೆ 60 ವರ್ಷತುಂಬಿರುವ ಹಿನ್ನೆಲೆ ವರ್ಷ ಪೂರ್ತಿ ಭಿನ್ನ ರೀತಿಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು. ಇದೇ ಮೊದಲ ಬಾರಿಗೆ 1 ತಿಂಗಳ ಕಾಲ ಆನ್‌ಲೈನ್ ಮೂಲಕ ಚಿತ್ರಸಂತೆ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿಯ ಚಿತ್ರಸಂತೆಯನ್ನು ಕೋವಿಡ್ ಸೇನಾನಿಗಳಿಗೆ ಅರ್ಪಣೆ ಮಾಡಲಾಗುತ್ತಿದೆ.
ಹೊರ ರಾಜ್ಯದ ಕಲಾವಿದರಷ್ಟೇ ಅಲ್ಲದೆ ವಿದೇಶಿ ಕಲಾವಿದರೂ ಆನ್‌ಲೈನ್ ಚಿತ್ರ ಸಂತೆಯಲ್ಲಿ ಭಾಗವಹಿಸಲಿದ್ದಾರೆ. ಭಿನ್ನರೀತಿಯಲ್ಲಿ ಸಂತೆ ನಡೆಯಲಿದೆ ಎಂದಿದ್ದಾರೆ.