ಮಾಗಡಿ: ಶಿಕ್ಷಣವೇ ದೇಶದ ಶಕ್ತಿ, ಉಪನ್ಯಾಸಕರು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ದೇಶದ ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಉಪನ್ಯಾಸಕರಿಗೆ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಸಲಹೆ ನೀಡಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿ 430 ಪದವಿ ಕಾಲೇಜುಗಳಿವೆ. ಪಠ್ಯಕ್ರಮ ಪರಿಷ್ಕರಣೆಯೂ ಆಗಲಿದೆ. ಡಿಪ್ಲೊಮಾ ಕೋರ್ಸ್‌ಗೆ ಬೇಡಿಕೆ ಕಡಿಮೆ ಯಿದ್ದು, ಅದರ ಸ್ವರೂಪ ಬದಲಿಸಿ, ಉದ್ಯೋಗಾಧರಿತ ಕೋರ್ಸ್ ಆಗಿ ಪರಿವರ್ತಿಸಲಾಗುವುದು. ಈ ಸಂಬಂಧ, ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿ ಕೊಳ್ಳಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ಹಾಗೂ ಮೂಲ ತಂತ್ರಜ್ಞಾನ ಹಾಗೂ ಕೌಶಲ್ಯ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ವಿವಿಧ ರಾಜ್ಯ ದೇಶಗಳಿಂದ ರಾಜ್ಯಕ್ಕೆ ಬಂದಿದ್ದ ಉದ್ಯೋಗಿಗಳು ತಮ್ಮ ಊರು ಗಳಿಗೆ ವಾಪಸಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸ್-ಫೇಲ್ ಆಗಿರುವವರಿಗೆ , ಪದವಿ, ಎಂಜಿನಿಯರ್ ಪಡೆದವರಿಗೂ ಹೆಚ್ಚಿನ ಉದ್ಯೋಗ ಅವಕಾಶ ಸಿಗಲಿದೆ. ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಕಾರ್ಯಪಡೆ ರಚನೆ ಮಾಡಲಾಗಿದೆ. ಕೃತಕ ಬುದಿಮತ್ತೆ ಯಂತಹ ಆಧುನಿಕ ತಂತ್ರಜ್ಞಾನ ವಿಷಯ ಗಳ ಕುರಿತು 2 ಸಾವಿರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಕೋರ್ಸ್ ನಡೆಸಲು ಹುವೈ ಸಂಸ್ಥೆ ಕ್ರಮ ಕೈಗೊಂಡಿದೆ ಎಂದರು.
ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಮಹಿಳಾ ಹಾಗೂ ಕಾನೂನು ಕಾಲೇಜುಗಳಿಗೆ ಪ್ರತ್ಯೇಕ ವೆಬ್‌ಸೈಟ್ ಇದ್ದು, ಕೋರ್ಸ್‌ಗಳ ವಿವರ, ಕಾಯಂ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯತೆ ದೊರಕಲಿದೆ ಎಂದು ತಿಳಿಸಿದರು. ಪ್ರಾಂಶುಪಾಲರಾದ ಡಾ. ಶೈಲಜಾ ಕಾಲೇಜಿನಿಂದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣರನ್ನು ಅಭಿನಂದಿಸಿದ ರು.
ಶಾಸಕ ಎ.ಮಂಜುನಾಥ್, ಎಂಎಲ್ ಸಿ ಆ.ದೇವೇಗೌಡ, ಡೀಸಿ ಎಂ.ಎಸ್. ಅರ್ಚನಾ, ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ಉಪನ್ಯಾಸಕ ಎಸ್. ಮಂಜು ನಾಥ್, ನಂಜುಂಡಪ್ಪ, ಜಗದೀಶ್ ನಡುವಿನಮಠ, ಚಂದ್ರಪ್ರಭಾ, ಸುಷ್ಮಾ, ಸೀಮಾ ಕೌಶರ್, ವೀಣಾ, ಗುರು ಮೂರ್ತಿ, ಚಿದಾನಂದಸ್ವಾಮಿ, ಚಲುವ ರಾಜು, ಜಿ.ಎಸ್. ವೀಣಾ ಇದ್ದರು.