Advertisement
ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, “ಪಕ್ಷದ ಹೈಕಮಾಂಡ್ ನನ್ನನ್ನು ಅವಗಣಿಸಿಲ್ಲ. ಗೌರವಗಳು ಸಿಕ್ಕಿವೆ. ನಮ್ಮ ನಡುವೆ ಈಗಾಗಲೇ ಒಪ್ಪಂದ ಆಗಿದೆ. ಇದನ್ನು ನಾನು ಮಾಧ್ಯಮದ ಎದುರು ಮಾತನಾಡುವುದಿಲ್ಲ. ಸಮಯ ಬಂದಾಗ ಈ ಬಗ್ಗೆ ಮಾತನಾಡೋಣ’ ಎಂದಿದ್ದಾರೆ.
“ನಾನು ಗಾಂಧಿ ಕುಟುಂಬಕ್ಕೆ ನಿಷ್ಠ. ಏಕೆಂದರೆ ಇಷ್ಟು ವರ್ಷಗಳ ಕಾಲ ಪಕ್ಷ ಒಟ್ಟಾಗಿರಲು ಈ ಕುಟುಂಬ ಶ್ರಮಿಸಿದೆ. ಈ ನಿಷ್ಠೆಗೆ ಒಂದು ದಿನ ಫಲ ಸಿಗುತ್ತದೆ ಎಂದು ನಾನು ನಂಬಿದ್ದೇನೆ. ಪಕ್ಷದಲ್ಲಿ ಮೂರ್ನಾಲ್ಕು ಡಿಸಿಎಂ ಸೃಷ್ಟಿಯ ಬಗ್ಗೆಯೂ ಮಾತುಕತೆಗಳು ಕೇಳಿ ಬರುತ್ತಿವೆ. ಇವೆಲ್ಲವೂ ಅವರವರ ಆಸೆಗಳು. ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ ರಾಜ್ಯ ಸರಕಾರದಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ. ಇಷ್ಟು ವರ್ಷ ನಾನು ಹೈಕಮಾಂಡ್‌ಗೆ ಬ್ಲಾಕ್‌ವೆುàಲ್ ಮಾಡದೆ ಕೆಲಸ ಮಾಡಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ’ ಎಂದು ಡಿಕೆಶಿ ಹೇಳಿದ್ದಾರೆ. ಶೇ. 99 ಗ್ಯಾರಂಟಿಗಳು ಜಾರಿ
ಕರ್ನಾಟಕದಲ್ಲಿ ಘೋಷಣೆ ಮಾಡಲಾಗಿದ್ದ ಗ್ಯಾರಂಟಿಗಳನ್ನು ಶೇ. 99ರಷ್ಟು ನಾವು ಜಾರಿ ಮಾಡಿದ್ದೇವೆ. ಕಷ್ಟದಲ್ಲಿರುವ ಜನರನ್ನು ಮೇಲೆತ್ತುವ ಪಕ್ಷದ ನೀತಿಯಂತೆಯೇ ನಾವು ನಡೆದುಕೊಳ್ಳುತ್ತಿದ್ದೇವೆ. ಗ್ಯಾರಂಟಿಗಳಿಗೆ ಸಂಬಂಧಿಸಿ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಆದರೆ ನಾವು ಜನರ ಕಲ್ಯಾಣವನ್ನು ಅವಗಣಿಸಿಲ್ಲ. ಇತ್ತೀಚೆಗೆ ದಿನಗಳಲ್ಲಿ ಬಿಜೆಪಿ ಕೂಡ ನಮ್ಮ ಗ್ಯಾರಂಟಿಗಳನ್ನು ನಕಲು ಮಾಡುತ್ತಿದೆ ಎಂದರು.
Related Articles
ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಮಾಡಬೇಕು ಎಂದು ಕೇಳುತ್ತಿಲ್ಲ. ಆದರೆ ನಾವು ಕಟ್ಟುತ್ತಿರುವ ತೆರಿಗೆಗೆ ಸರಿಯಾದ ಫಲವನ್ನಷ್ಟೇ ಕೇಳುತ್ತಿದ್ದೇವೆ. ನಾವು ಕಟ್ಟುತ್ತಿರುವ ತೆರಿಗೆಗಳು ಉತ್ತರ ಪ್ರದೇಶ ಮತ್ತು ಬಿಹಾರಗಳನ್ನು ತಲುಪುತ್ತಿವೆ. ನಮಗೆ ಅನ್ಯಾಯವಾಗುತ್ತಿದೆ. ಇದನ್ನು ಪಡೆದುಕೊಳ್ಳಲು ಬೇಕಿರುವುದನ್ನು ನಾವು ಮಾಡುತ್ತೇವೆ ಎಂದರು. ಅಲ್ಲದೆ ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸುವುದಾಗಿ ಅವರು ಹೇಳಿದರು.
Advertisement