Advertisement
ಮೋದಿ ಉಪನಾಮದ ಕುರಿತು ರಾಹುಲ್ ಮಾನ ಹಾನಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದ್ದ ಪ್ರಕ ರಣದಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯವು ರಾಹುಲ್‌ರನ್ನು ದೋಷಿ ಎಂದು ಘೋಷಿಸಿತ್ತು. ಅಲ್ಲದೇ 2 ವರ್ಷಗಳ ಜೈಲು ಶಿಕ್ಷೆಯ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ತೀರ್ಪನ್ನು ಮರು ಪರಿ ಶೀಲಿ ಸುವಂತೆ ಕೋರಿ ಮೇಲ್ಮನವಿ ಅರ್ಜಿ ಸಲ್ಲಿಸಲು ಪಕ್ಷದ ಕಾನೂನು ಸಲಹೆಗಾರರು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೇನು ಒಂದು ಅಥವಾ 2 ದಿನಗಳಲ್ಲಿ ಸೆಷನ್ಸ್ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಗಳಿವೆ.
Related Articles
Advertisement
ಲಾಹುರಬೀರ್ ಬಡಾವಣೆಯಲ್ಲಿರುವ ತಮ್ಮ ನಿವಾಸದ ಗೇಟಿನ ಮೇಲೆ “ಇದು ಶ್ರೀ ರಾಹುಲ್ ಗಾಂಧಿ ಅವರ ಮನೆ’ ಎನ್ನುವ ಬೋರ್ಡ್ ಹಾಕುವ ಮೂಲಕ, ಸಾಂಕೇತಿಕ ವಾಗಿ ರಾಹುಲ್‌ಗೆ ನಿವಾಸ ವನ್ನು ಒಪ್ಪಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಸರಕಾರ ವಂಚನೆಯಿಂದ ನಮ್ಮ ನಾಯಕನ ಮನೆ ಕಸಿಯುತ್ತಿದೆ. ಆದರೆ ದೇಶ ದಲ್ಲಿರುವ ಪ್ರತೀ ಕಾರ್ಯಕರ್ತರ ನಿವಾಸವೂ ರಾಹುಲ್ ಅವರ ಸ್ವಂತ ನಿವಾಸವೆಂದು ರಾಯ್ ಹೇಳಿದ್ದಾರೆ.
ಕಲಾಪ ಮುಂದೂಡಿಕೆ ಅದಾನಿ ಗ್ರೂಪ್ ವಿರುದ್ಧದ ಹಿಂಡನ್‌ಬರ್ಗ್ ವರದಿ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿ ಬುಧವಾರವೂ ರಾಜ್ಯಸಭೆಯಲ್ಲಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಸಭೆಯಲ್ಲಾದ ಗದ್ದಲದಿಂದ ಕಲಾಪಕ್ಕೆ ಅಡ್ಡಿಯುಂಟಾದ ಹಿನ್ನೆಲೆ ಸೋಮವಾರದವರೆಗೆ ಮುಂದೂಡಲಾಗಿದೆ. ವಯನಾಡ್ ಚುನಾವಣೆಗೆ ಗಡಿಬಿಡಿ ಇಲ್ಲ
ಸಂಸದ ಸ್ಥಾನದಿಂದ ರಾಹುಲ್ ಅನರ್ಹ ಗೊಂಡಿರುವ ಕಾರಣದಿಂದ ವಯನಾಡ್ ಸಂಸತ್ ಕ್ಷೇತ್ರಕ್ಕೆ ಮರುಚುನಾವಣೆ ಮಾಡುತ್ತಾರಾ ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಈ ವಿಚಾರದಲ್ಲಿ ಚುನಾವಣ ಆಯೋಗವು ಕಾದು ನೋಡುವ ನೀತಿ ಅನುಸರಿಸಿದೆ. ಬುಧವಾರ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಮಾತ್ರ ಪ್ರಕಟಿಸಿದ ಇಸಿ ವಯನಾಡ್‌ಗೆ ಮರು ಚುನಾವಣೆ ಘೋಷಿಸಿಲ್ಲ. “ಫೆಬ್ರವರಿವರೆಗೆ ಖಾಲಿ ಇದ್ದಂಥ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶವಿರುವ ಕಾರಣ, ಈ ವಿಚಾರದಲ್ಲಿ ತತ್‌ಕ್ಷಣದ ನಿರ್ಣಯ ತೆಗೆದುಕೊಂಡಿಲ್ಲ’ ಎಂದು ಮುಖ್ಯ ಚುನಾವಣೆ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ತಿದ್ದುಪಡಿ ಮಸೂದೆ ಪಾಸ್
ಭಾರತೀಯ ಸ್ಪರ್ಧಾತ್ಮಕ ಆಯೋಗದ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಬುಧವಾರ ಯಾವುದೇ ಚರ್ಚೆಯಿಲ್ಲದೇ ಅಂಗೀಕಾರ ಸಿಕ್ಕಿದೆ! ಅದಾನಿ ವಿಚಾರದಲ್ಲಿ ವಿಪಕ್ಷಗಳು ಗಲಾಟೆ ಮುಂದುವರಿಸಿದ್ದರಿಂದ ವಿತ್ತಸಚಿವೆ ಮಂಡಿಸಿದ ಈ ಮಹತ್ವದ ಮಸೂದೆ ಚರ್ಚೆಗೊಳಗಾಗಲೇ ಇಲ್ಲ. ಸ್ಪರ್ಧಾ ಆಯೋಗವು ಇನ್ನು ಮುಂದೆ ಯಾವುದೇ ವ್ಯಾಪಾರ ಸಂಸ್ಥೆಗಳಿಗೆ ಅವುಗಳ ಭಾರತೀಯ ವಹಿವಾಟು ಮಾತ್ರವಲ್ಲದೇ, ಜಾಗತಿಕ ವಹಿವಾಟನ್ನು ಪರಿಗಣಿಸಿ ದಂಡ ವಿಧಿಸಲು ಅನುಮತಿ ಲಭಿಸಿದೆ. ಅದಕ್ಕೆ ಈ ತಿದ್ದುಪಡಿಯೇ ಕಾರಣ. ಇಷ್ಟರ ಮಧ್ಯೆ ಲೋಕಸಭೆ ಕಲಾಪವೂ ಮುಂದೂಡಿಕೆಯಾಗಿದೆ. ಸದ್ಯಕ್ಕೆ ಈ ಬಿಕ್ಕಟ್ಟು ಬಗೆಹರಿಯುವ ಯಾವುದೇ ಸಾಧ್ಯತೆಯಿಲ್ಲ. ಮೊಹಮ್ಮದ್ ಫೈಜಲ್ ಸಂಸದ ಸ್ಥಾನ ವಾಪಸ್
ರಾಹುಲ್‌ಗಾಂಧಿ ಸಂಸತ್ ಸ್ಥಾನ ಕಳೆದು ಕೊಂಡಿರುವ ನಡುವೆಯೇ, ಇಂಥದ್ದೇ ಮತ್ತೂಂದು ಅನರ್ಹತೆ ಪ್ರಕರಣದಲ್ಲಿ ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಮತ್ತೆ ಲೋಕಸಭೆ ಸದಸ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2009ರಲ್ಲಿ ನಡೆದ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ಅವರ ಕೊಲೆ ಪ್ರಕ ರಣದಲ್ಲಿ ಫೈಜಲ್ ವಿರುದ್ಧ 2016ರಲ್ಲಿ ಕೇಸು ದಾಖಲಿಸಲಾಗಿತ್ತು. 2019ರಲ್ಲಿ ಲಕ್ಷದ್ವೀಪ ಸೆಷನ್ಸ್ ನ್ಯಾಯಾಲಯ ಅವರನ್ನು ದೋಷಿ ಎಂದು ಪರಿಗಣಿಸಿ, 10 ವರ್ಷಗಳ ಜೈಲು ಶಿಕ್ಷೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಜ.18ರಂದು ಲಕ್ಷದ್ವೀಪಕ್ಕೆ ಮರುಚುನಾವಣೆ ಘೋಷಿಸಿ, ಜ.27ಕ್ಕೆ ಮತದಾನ ನಿಗದಿಪಡಿಸಿತ್ತು. ಆದರೆ ಚುನಾವಣೆಗೆ 2 ದಿನಕ್ಕೂ ಮುಂಚೆ ಕೇರಳ ಹೈಕೋರ್ಟ್ ಫೈಜಲ್ ವಿರುದ್ಧದ ತೀರ್ಪು ಅಮಾನತುಗೊಳಿಸಿ, ಮರು ಚುನಾವಣೆ ತಡೆಹಿಡಿಯಲು ಆದೇಶಿಸಿತ್ತು. ಈಗ ಫೈಜಲ್ ಮತ್ತೆ ಲೋಕಸಭೆ ಸದಸ್ಯತ್ವ ಪಡೆದುಕೊಂಡಿ ದ್ದಾರೆ. ಆದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ಮುಂದುವರಿಯಲಿದೆ.