Advertisement

15 ಸಾವಿರ ಸಸಿ ವಿತರಣೆಗೆ ಸಿದ್ಧತೆ

05:46 AM Jun 04, 2020 | Lakshmi GovindaRaj |

ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 15 ಸಾವಿರ ಸಸಿ ವಿತರಿಸಲಾಗುವುದು ಎಂದು ಎಚ್‌.ವಿ. ರಾಜೀವ್‌ ಸ್ನೇಹ ಬಳಗದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ವಿತರಣೆಗೆ ಸಿದ್ದಪಡಿಸಿರುವ ಸಸಿಗಳ ಪರಿಶೀಲಿಸಿ ಮಾತನಾಡಿದ ಅವರು, ಲಕ್ಷವೃಕ್ಷ ಆಂದೋಲವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟಸ್ಟ್‌, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಎಚ್‌.ವಿ.ರಾಜೀವ್‌ ಸ್ನೇಹ  ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವತ್ಛ ಮೈಸೂರನ್ನು ಹಸಿರು ಮೈಸೂರಾಗಿ ಮಾಡುವುದೇ ಯೋಜನೆಯ ಉದ್ದೇಶ ಎಂದರು.

ವಿವಿಧ ಜಾತಿ ಸಸಿ: ಬೇವು, ಮಾವು, ಅರಳಿ, ಅತ್ತಿ, ಮಾವು, ನಾಗಗನಿ, ಬನರಿ, ಸಂಪಿಗೆ, ಹಲಸು, ಹೊಂಗೆ, ಶಿವನಿ, ಹೊಳೆ ಮತ್ತಿ, ಬಾಗರ, ಬದಾಮಿ, ಬುಗುರಿ, ನೆರಳೆ, ಬಸವನಪಾದ ಮೊದಲಾದ ಗಿಡಗಳನ್ನು ವಿತರಿಸಲಾಗುವುದು. ಉಚಿತ ಸಸಿ  ಪಡೆಯಲು ಆಸಕ್ತರು ಮೊ: 9353006616, 9731957792 ಇಲ್ಲಿಗೆ ಸಂಪರ್ಕಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಪಂತಜಲಿ ಯೋಗ ಶಿಕ್ಷಣ ಸಮಿತಿ ನಗರ ಸಂಘಟನಾ ಪ್ರಮುಖ್‌ ನಾಗಭೂಷಣ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ  ಸಂಘದ ಅಧ್ಯಕ್ಷ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಬಾಬು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಜಯ್‌ ಕುಮಾರ್‌ ನಾಗನಾಳ, ಮಾಜಿ ಮೇಯರ್‌ ಭೈರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next