Advertisement

ಮದುವೆಯಲ್ಲಿ ಅಂದವಾಗಿ ಕಾಣಲು ಪೂರ್ವ ತಯಾರಿ

11:43 PM Feb 24, 2020 | mahesh |

ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ ಹೋಗುವುದಲ್ಲ. ಮದುವೆ ವಧು ನೀವಾಗಿದ್ದರೆ ಹೀಗಿರಲಿ ನಿಮ್ಮ ಸೌಂದರ್ಯ ಪ್ರಜ್ಞೆಗಾಗಿ ಪೂರ್ವ ತಯಾರಿ ಹೀಗರಬೇಕಾಗುತ್ತದೆ.

Advertisement

ಮುಖದ ಕಾಂತಿ: ಇರಲಿ ಗಮನ
ನಿಮ್ಮ ಮುಖವು ಆಕರ್ಷಕವಾಗಿರಬೇಕಾದರೆ ನೀರಿನಿಂದ ಆಗಾಗ ಮುಖವನ್ನು ತೊಳೆಯುತ್ತಿರಬೇಕಾಗುತ್ತದೆ. ಸ್ಕಿನ್‌ ಟೋನ್‌ ಆಗದಂತೆ ನೀವು ಸನ್‌ಸ್ಕಿನ್‌ನ್ನು ಬಳಸಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮತ್ತು ಸುಂದರವಾಗಿರುವಂತೆ ಮಾಡುತ್ತದೆ. ಕೊಳಕು ಮುಕ್ತ ಚರ್ಮ ರಂಧ್ರಗಳನ್ನು ಮುಕ್ತವಾಗಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ಉಸಿರಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಮದುವೆ ದಿನ ಸುಂದರವಾಗಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ.

ಎಪ್ರೊಲಿಯೇಶನ್‌
ಸತ್ತ ಜೀವಕೋಶಗಳು ಮತ್ತು ಕಪ್ಪು ತಲೆಗಳಿಂದ ಮುಕ್ತವಾಗಿರುವ ಚರ್ಮವನ್ನು ಪಡೆಯುವ ಅತ್ಯುತ್ತಮ ವಿಧಾನವೆಂದರೆ ಎಪ್ರೊಲಿಯೇಶನ್‌. ವಾರದಲ್ಲಿ ಎರಡು ಅಥವಾ ಮೂರು ಬಾರಿ ಫೇಸ್‌ ವಾಶ್‌ ಬಳಸುವ ಮೊದಲು ನಿಮ್ಮ ಚರ್ಮವನ್ನು ಎಪ್ರೊಲಿಯೇಟ್‌ ಮಾಡಿ. ಸಾಫ್ಟ್ ಆಗಿರುವ ಫೇಸ್‌ ವಾಶ್‌ ಬಳಸಿ. ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟಿನಿಂದ ಮಾಡಿದ ಮನೆಯಲ್ಲಿ ತಯಾರಿಸಿದ ಸðಬ್‌ನ್ನು ನೀವು ಬಳಸಿಕೊಳ್ಳಬಹುದು.

ಮುಖ, ಹೇರ್‌ ಸ್ಪಾ
ಮದುವೆಗೆ ಕನಿಷ್ಠ ಆರು ತಿಂಗಳಿರುವಾಗ ನೀವು ಫೇಶಿಯಲ್‌ಗ‌ಳನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ಮುಖಕ್ಕೆ ಒಂದಿಷ್ಟು ಗ್ಲೋ ಬರುತ್ತದೆ. ಒಂದು ವೇಳೆ ನಿಮ್ಮಲ್ಲಿ ಸಮಯ ಕಡಿಮೆ ಇದ್ದರೆ ನೀವು ಗೋಲ್ಡನ್‌ ಫೇಶಿಯಲ್‌ ಮಾಡಿಕೊಳ್ಳಿ. ಮುಖಕ್ಕೆ ಫೇಶಿಯಲ್‌ ಮಾಡಿಕೊಳ್ಳುವ ಹಾಗೆ ಆರೋಗ್ಯಕರ ಮತ್ತು ಹೊಳೆಯುವ ಕೂದಲಿಗೆ, ತಿಂಗಳಿಗೊಮ್ಮೆ ಹೇರ್‌ ಸ್ಪಾ ಮಾಡಲು ಪ್ರಾರಂಭಿಸಿ.

ಸುಂದರವಾದ ಕೈ, ಪಾದಗಳು
ರಾತ್ರಿ ನಿದ್ರೆ ಮಾಡುವ ಮೊದಲು ಆಲಿವ್‌ ಎಣ್ಣೆಯಿಂದ ನಿಮ್ಮ ಕೈ ಕಾಲುಗಳನ್ನು ಮಸಾಜ್‌ ಮಾಡಿಕೊಳ್ಳಿ. ಇದರಿಂದ ನಿಮ್ಮ ಕೈ ಕಾಲು ಮೃದುವಾಗಿಸುತ್ತದೆ. ಎರಡೂ ಕೈ ಮತ್ತು ಕಾಲುಗಳ ನಯಗೊಳಿಸಿದ ಉಗುರುಗಳು ನಿಮಗೆ ಹೆಚ್ಚಿನ ಆಕರ್ಷಣೆಯನ್ನು ನೀಡುತ್ತದೆ. ಮದುವೆಗೆ ಎರಡು ವಾರ ಇರುವಾಗ ನೀವು ಈ ರೀತಿ ಮಸಾಜ್‌ ಮಾಡಿಕೊಳ್ಳಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next