Advertisement

ವಿದ್ಯಾರ್ಥಿಗಳಿಂದ ಸೀಡ್‌ಬಾಲ್‌ ತಯಾರಿ

02:59 PM Jun 07, 2017 | Team Udayavani |

ದಾವಣಗೆರೆ: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಉತ್ತಿಷ್ಠ ಭಾರತ ಸಂಸ್ಥೆ, ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಮಹಾತ್ಮ ವಿದ್ಯಾಶಾಲೆ ಸಹಯೋಗದಲ್ಲಿ ಮಂಗಳವಾರ ಪ್ರಕೃತಿಗಾಗಿ ಒಂದು ದಿನ- ಸೀಡ್‌ಬಾಲ್‌ ಅಭಿಯಾನದಡಿ ವಿದ್ಯಾರ್ಥಿಗಳು ಬೀಜದುಂಡೆ ತಯಾರಿಸಿದರು. 

Advertisement

ಉತ್ತಿಷ್ಠ ಭಾರತ… ಈ ವರ್ಷ 3 ಕೋಟಿ ಬೀಜದುಂಡೆ ತಯಾರಿಸುವ ಮಹಾದಾಸೆ ಹೊಂದಿದೆ. ಪ್ರತಿ ಜಿಲ್ಲೆಯಲ್ಲೂ ಬೀಜದುಂಡೆ ಅಭಿಯಾನ ಕೈಗೊಂಡಿದೆ. ಈವರೆಗೆ 14 ಲಕ್ಷ ಬೀಜದುಂಡೆ ತಯಾರಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 10 ಲಕ್ಷ ಬೀಜದುಂಡೆ ತಯಾರಿಸುವ ಗುರಿ ಇದೆ ಎಂದು ಈ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು. 

ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನಂತರ ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಮಹಾತ್ಮ ವಿದ್ಯಾಶಾಲೆಯಲ್ಲಿ ನಡೆದ ಬೀಜದುಂಡೆ ತಯಾರಿಸುವ ಅಭಿಯಾನಕ್ಕೆ ಬಡಾವಣಾ ಠಾಣೆ ಪಿಎಸ್‌ಐ ವೈ. ಶಿಲ್ಪಾ ಚಾಲನೆ ನೀಡಿದರು. ಶಾಲಾ ಕಾರ್ಯದರ್ಶಿ ಎಸ್‌.ಜಿ. ಕುಲಕರ್ಣಿ, ವಕೀಲ ಟಿ.ಕೆ. ಸುರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next