Advertisement
ಹರೇಕಳ ಗ್ರಾಮ ಪಂಚಾಯತ್‌ನಲ್ಲಿ ಜನಪ್ರತಿ ನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹರೇಕಳ ಗ್ರಾಮದ ಮಲಾರ್ ಮತ್ತು ರಾಜುಗುಡ್ಡೆ ಪ್ರದೇಶದಲ್ಲಿ ವಸತಿ ಯೋಜನೆಗಾಗಿ ಮೀಸಲಿಟ್ಟ ಜಮೀನಿನ ಮಾಹಿತಿ ಪಡೆದ ಬಳಿಕ ಮಲಾರ ಬಳಿಯಿರುವ ಜಮೀನು ಪರಿಶೀಲನೆ ನಡೆಸಿ ಮಾತನಾಡಿದ ಅವರು ಈಗಾಗಲೇ ಗ್ರಾಮದಲ್ಲಿ 400ಕ್ಕೂ ಹೆಚ್ಚು ವಸತಿ ರಹಿತರ ಅರ್ಜಿ ಸಲ್ಲಿಕೆಯಾಗಿದ್ದು, ಸರ್ವೇ ಬಳಿಕ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಲಿದೆ. ಪಂಚಾಯತ್‌ನ ಜನಪ್ರತಿನಿಧಿಗಳ ಮುತು ವರ್ಜಿಯಿಂದ ಈ ಕಾರ್ಯ ಸಂಪನ್ನ ಗೊಂಡಿದೆ ಎಂದು ತಿಳಿಸಿದರು.
ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ. ಮಾತನಾಡಿ, ಈಗಾಗಲೇ ಕೆಲವು ಸಂಘಟನೆಗಳು ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿವೆ. ನಿವೇಶನ ರಹಿತರಿಗೆ ಪಂಚಾಯತ್ ಈಗಾಗಲೇ 9.50 ಎಕ್ರೆ ಜಮೀನು ಮೀಸಲಿಡಲಿಟ್ಟಿದ್ದು, ಗಡಿ ಗುರುತಿಗಾಗಿ ಸರ್ವೇಯರ್ ಬಂದಿದ್ದಾರೆ. ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಶೀಘ್ರ ಈಡೇರಲಿದೆ ಎಂದು ತಿಳಿಸಿದರು.
Related Articles
ನಿವೇಶನ ಸಮಿತಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಮಾತನಾಡಿ, ನಿವೇಶನ ವಿಚಾರ ಪ್ರತೀ ಗ್ರಾಮಸಭೆಯಲ್ಲೂ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಹರೇಕಳ ಎಲ್ಲ ವಿಚಾರದಲ್ಲೂ ಮೊದಲ ಸ್ಥಾನದಲ್ಲಿದೆ. ಮೀಸಲು ಜಮೀನು ಸರ್ವೇ ಆದ ಬಳಿಕ ಅರ್ಹರ ಪಟ್ಟಿ ತಯಾರಿಸಲಾಗುತ್ತದೆ ಎಂದರು.
Advertisement