Advertisement
ಈ ಹಿಂದೆಯೂ ಪ್ರಿಪೇಯ್ಡ ಮೀಟರ್ ಇತ್ತು. ಆದರೆ, ಅದರ ಬಗ್ಗೆ ಗ್ರಾಹಕರು ಅಷ್ಟೊಂದು ಮನಸ್ಸು ಮಾಡುತ್ತಿ ರಲಿಲ್ಲ ಹಾಗೂ ಅರಿವಿನ ಕೊರತೆಯೂ ಇದಕ್ಕೆ ಕಾರಣವಾಗಿತ್ತು. ಆದರೆ ಜೂನ್‌ನಲ್ಲಿ ಕೈಸೇರುತ್ತಿರುವ ದುಬಾರಿ ವಿದ್ಯುತ್ ಬಿಲ್ ನಿಂದ ಕಂಗೆಟ್ಟ ಗ್ರಾಹಕರು, “ಹಣ ಇದ್ದಷ್ಟು ಬಳಕೆ’ಯ ಮೊರೆಹೋಗುತ್ತಿದ್ದಾರೆ. ಇದರ ಭಾಗವಾಗಿ ಪ್ರಿಪೇಯ್ಡ ಮೀಟರ್‌ಗೆ ಆಸಕ್ತಿ ತೋರಿಸುತ್ತಿದ್ದಾರೆ.
Related Articles
Advertisement
“ಎಸ್ಕಾಂಗಳಿಗೆ ಆಗಲಿದೆ ಹೊರೆ‘: “ವಾಸ್ತವವಾಗಿ ಗೃಹ ಬಳಕೆದಾರರಿಗಿಂತ ಪ್ರಿಪೇಯ್ಡ ಮೀಟರ್ ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಉದಾಹರಣೆಗೆ 1,400 ಕಿ.ವಾ. ಸ್ಥಾವರ ಸಾಮರ್ಥ್ಯದ ಒಬ್ಬ ಉದ್ಯಮಿ ನಿಗದಿತ ಶುಲ್ಕ ಮತ್ತು ವಿದ್ಯುತ್ ಬಳಕೆ ಶುಲ್ಕ ಸೇರಿ ಎರಡು ತಿಂಗಳಿಗೆ ಲೆಕ್ಕಹಾಕಿ ಕೋಟ್ಯಂತರ ರೂಪಾಯಿ ಎಸ್ಕಾಂಗೆ ಠೇವಣಿ ಇಟ್ಟಿರುತ್ತಾನೆ. ಅದನ್ನು ಬ್ಯಾಂಕ್‌ನಲ್ಲಿ ಶೇ. 12ರ ಬಡ್ಡಿದರದಲ್ಲಿ ತಂದು ಎಸ್ಕಾಂಗೆ ಕೊಟ್ಟಿರುತ್ತಾನೆ. ಆದರೆ, ಆ ಎಸ್ಕಾಂನಿಂದ ವರ್ಷಕ್ಕೆ ಒಂದು ಬಾರಿ ಶೇ. 6ರ ಬಡ್ಡಿ ಲೆಕ್ಕಹಾಕಿ ಆ ಬಡ್ಡಿಯನ್ನು ಮಾತ್ರ ಪಾವತಿಸಲಾಗುತ್ತದೆ. ಪ್ರಿಪೇಯ್ಡ ಮೀಟರ್ ಅಳವಡಿಸಿಕೊಂಡರೆ, ಈ ಎರಡು ತಿಂಗಳ ಠೇವಣಿಯ ಪೈಕಿ ಒಂದು ತಿಂಗಳದ್ದು ವಾಪಸ್ ಬರುತ್ತದೆ. ಅದನ್ನು ತನ್ನ ವ್ಯಾಪಾರೋದ್ಯಮದಲ್ಲಿ ವಿನಿಯೋಗಿಸಬಹುದು’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸಲಹಾ ಮಂಡಳಿ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್ ತಿಳಿಸುತ್ತಾರೆ.
“ಹಾಗೊಂದು ವೇಳೆ ಉದ್ಯಮಿಗಳು ಪ್ರಿಪೇಯ್ಡ ಮೀಟರ್ ಕಡೆಗೆ ಮುಖಮಾಡಿದರೆ, ಎಸ್ಕಾಂಗಳಿಗೆ ಮುಂಬರುವ ದಿನಗಳಲ್ಲಿ ಆರ್ಥಿಕ ಹೊರೆ ಆಗಲಿದೆ. ಯಾಕೆಂದರೆ, ಐದೂ ಎಸ್ಕಾಂಗಳಲ್ಲಿ ಗೃಹ ಬಳಕೆದಾರರು, ಸಣ್ಣ ಮತ್ತು ಭಾರಿ ಉದ್ಯಮಿಗಳ ಹಣ ಠೇವಣಿ ರೂಪದಲ್ಲಿ ಸುಮಾರು 9,102 ಕೋಟಿ ರೂ. ಇದೆ. ಇದು ಎರಡು ತಿಂಗಳ ಮೀಟರ್ ಠೇವಣಿ (2 ಎಂಎಂಡಿ) ಆಗಿದೆ. ಇದರಲ್ಲಿ ಒಂದು ಎಂಎಂಡಿ ಹಿಂಪಾವತಿಸುವುದಾದರೆ, 4,500 ಕೋಟಿ ರೂ. ಆಗುತ್ತದೆ’ ಎಂದೂ ಅವರು ಹೇಳಿದರು.
ಠೇವಣಿ ಮೊತ್ತದ ವಿವರ
ಪ್ರಸ್ತುತ ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಪ್ರಿಪೇಯ್ಡ ಮೀಟರ್ ಅಳವಡಿಸಲಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಅಂದಾಜು 80-85 ಸಾವಿರ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರು ಈ ಮಾದರಿಯ ಮೀಟರ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ವಿವಿಧ ಎಸ್ಕಾಂಗಳು ಎಲ್ಲ ಪ್ರಕಾರದ ಗ್ರಾಹಕರಿಂದ ಸಂಗ್ರಹಿಸಿದ ವಿದ್ಯುತ್ ಬಳಕೆ ಮತ್ತು ಸ್ಥಾವರ ಸಾಮರ್ಥ್ಯ ಸೇರಿ 2 ತಿಂಗಳ ಮೀಟರ್ ಠೇವಣಿ ಮೊತ್ತದ ವಿವರ ಹೀಗಿದೆ.