ಮಹಾರಾಷ್ಟ್ರ : ಕೇಂದ್ರ ಸರ್ಕಾರದ ನಿರ್ದೇಶನದ ನಂತರ ಮುಂಬೈ ನಾಗರಿಕ ಸಂಸ್ಥೆ ಗರ್ಭಿಣಿಯರಿಗೆ ಪೂರ್ವ ನೋಂದಣಿ ಇಲ್ಲದೆ ಅನುಮೋದಿತ ಕೇಂದ್ರಗಳಲ್ಲಿ ಕೋವಿಡ್ 19 ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಗರ್ಭಿಣಿಯರು ಸೋಮವಾರ(ಮೇ.24) ಮತ್ತು ಬುಧವಾರದ(ಮೆ. 26) ನಡುವೆ ಮಹಾರಾಷ್ಟ್ರ ಸರ್ಕಾರ ಮತ್ತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಡೆಸುತ್ತಿರುವ ಕೇಂದ್ರಗಳಲ್ಲಿ ನೇರವಾಗಿ ಬಂದು ಲಸಿಕೆಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಮೂರು ದಿನಗಳಲ್ಲಿ ಲಸಿಕೆ ನೀಡಲು ಅರ್ಹವಾದ ವಿಭಾಗಗಳ ಪಟ್ಟಿಯಲ್ಲಿ ಈಗ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಬಿಎಂಸಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಟೂಲ್ ಕಿಟ್ ಜಟಾಪಟಿ, ಟ್ವಿಟರ್ ಕಚೇರಿಗೆ ಪೊಲೀಸ್; ಇದು ಬಿಜೆಪಿಯ ಹೇಡಿತನದ ದಾಳಿ: ಕಾಂಗ್ರೆಸ್
ಆದ್ಯಾಗ್ಯೂ, ಅವರು ಲಸಿಕಾ ಕೇಂದ್ರಗಳಲ್ಲಿಯೇ ನೋಂದಣಿ ಮಾಡಿಕೊಂಡು ಲಸಿಕೆಯನ್ನು ಸ್ವೀಕರಿಸಬೇಕಾಗಿದೆ. ಇನ್ನು, ಹಾಲುಣಿಸುವ ತಾಯಂದಿರಿಗೆ ಕೋವಿಡ್ 19 ಲಸಿಕೆಗಳನ್ನು ತೆಗೆದುಕೊಳ್ಳಲು ಅನುಮತಿ ನೀಡುವ ಕೇಂದ್ರ ಸರ್ಕಾರದ ಮೇ 19 ರ ನಿರ್ದೇಶನವನ್ನು ಬಿಎಂಸಿ ಉಲ್ಲೇಖಿಸಿದೆ.
ಹಾಲುಣಿಸುವ ತಾಯಂದಿರಿಗೆ ಲಸಿಕೆಗಳನ್ನು ನೀಡುವಾಗ, ಅಗತ್ಯವಿರುವ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ವೈದ್ಯಕೀಯ ವಿವರಗಳೊಂದಿಗೆ ಅಗತ್ಯ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಗರ್ಭಿಣಿಯರು ಸ್ತ್ರೀರೋಗತಜ್ಞರ ಲೆಟರ್ ಹೆಡ್ ನಲ್ಲಿ ಪ್ರಮಾಣಪತ್ರವನ್ನು ಸ್ವ-ಒಪ್ಪಿಗೆಯ ಪತ್ರದ ಜೊತೆಗೆ ತರಬೇಕಾಗುತ್ತದೆ ಎಂದು ನಾಗರಿಕ ಸಂಸ್ಥೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಪ್ರಸ್ತುತ, ಮುಂಬೈನಲ್ಲಿ 321 ಸಕ್ರಿಯ ಲಸಿಕಾ ಕೇಂದ್ರಗಳನ್ನು ಹೊಂದಿದ್ದು, ಈವರೆಗೆ 29,80,478 ನಾಗರಿಕರಿಗೆ ಸೋಮವಾರ 25,211 ಇನಾಕ್ಯುಲೇಷನ್ ಸೇರಿದಂತೆ ಕೋವಿಡ್19 ಲಸಿಕೆಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಗಂಗಾವತಿಯಲ್ಲಿ ನಿಯಮ ಉಲ್ಲಂಘಿಸಿ ಬಟ್ಟೆ ಮಾರಾಟ: ಅಂಗಡಿಗಳಿಗೆ ಬೀಗ ಜಡಿದ ಪೌರಾಯುಕ್ತ