Advertisement

ಎಸ್ಟೇಟ್‌ನಲ್ಲಿ ಗರ್ಭಿಣಿ ಆನೆ, ಮರಿ ಸಾವು

11:05 AM Aug 14, 2017 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪೊನ್ನಂಪೇಟೆ ವಲಯದಂಚಿನ ಎಸ್ಟೇಟ್‌ನಲ್ಲಿ ಗರ್ಭಿಣಿ ಆನೆಯೊಂದು ಮೃತಪಟ್ಟಿದೆ. ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನ ಆಶಿಕ್‌ ಚೆಂಗಪ್ಪರ ತೋಟದಲ್ಲಿ ಸುಮಾರು 20 ವರ್ಷದ ಹೆಣ್ಣಾನೆ ಹಾಗೂ ಅದರ ಗರ್ಭ
ದಲ್ಲಿದ್ದ ಹೆಣ್ಣು ಭ್ರೂಣ ಸಾವನ್ನಪ್ಪಿದೆ.

Advertisement

ತೋಟದ ಬಳಿಯ ಅರಣ್ಯ ಪ್ರದೇಶದಲ್ಲಿ ಕೆಲದಿನಗಳಿಂದ ಹೆಣ್ಣಾನೆ ಕಾಣಿಸಿಕೊಂಡಿದ್ದು, ಆನೆ ಅಲ್ಲಲ್ಲಿ ನಿಂತು, ಕುಳಿತು ನಡೆಯುತ್ತಿತ್ತೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಗರ್ಭಿಣಿಯಾಗಿದ್ದ ಆನೆ ಆ.12 ರಂದು ಮೃತಪಟ್ಟಿದ್ದು, ಭಾನುವಾರ ಗೊತ್ತಾಗಿದೆ. ಪಶುವೈದ್ಯ ಡಾ.
ಉಮಾಶಂಕರ್‌ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಡಿಎಫ್ಒ ಮರಿಯಾಕ್ರಿಸ್ತಾ, ಎಸಿಎಫ್ ಶ್ರೀಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮರದಿಂದ ಬಿದ್ದು ಚಿರತೆ ಸಾವು
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಂಚಿನ ತಿತಿಮತಿ ವಲಯದ ಹೊಸಹಳ್ಳಿಯ ತಾತಾ ಎಸ್ಟೇಟ್‌ನಲ್ಲಿ ಬೇಟೆಯಾಡಲು ಮರವೇರಿದ್ದ ಚಿರತೆ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ. 6 ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಬೇಟೆಗಾಗಿ ಮರವೇರಿ, ನಂತರ ಕೆಳಗಿಳಿಯುವ
ವೇಳೆ ಕಾಲುಜಾರಿ ಬಿದ್ದಿದೆ. ನೆಲಕ್ಕೆ ಬಿದ್ದ ರಭಸಕ್ಕೆ ಸ್ಥಳದಲ್ಲೇ ಚಿರತೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next