Advertisement

ಲಘು ಆಹಾರಕ್ಕೆ ಇರಲಿ ಆದ್ಯತೆ

11:55 PM May 20, 2021 | Team Udayavani |

ದೇಹದ ಎಲ್ಲ ಚಟುವಟಿಕೆಗಳಿಗೂ ಆಹಾರವೇ ಇಂಧನ. ಇದ ಕ್ಕಾಗಿ ಹಿತವಾಗಿ, ಮಿತವಾಗಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲೇಬೇಕು. ನಾವು ಸೇವಿಸುವ ಆಹಾರವು ಪ್ರೊಟೀನ್‌, ವಿಟಮಿನ್‌, ಕಾಬೋìಹೈಡ್ರೇಟ್‌, ಸಸಾರಜನಕ, ಶರ್ಕರ ಪಿಷ್ಟ, ಕೊಬ್ಬು, ಖನಿಜಾಂಶ, ಲವಣಗಳು ಹಾಗೂ ನೀರನ್ನು ಒಳಗೊಂಡಿ ರಬೇಕು. ಆಗಲೇ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮವಾಗಿರಲು ಸಾಧ್ಯ.

Advertisement

ಆಹಾರಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಎಂದು ಮೂರು ಮುಖ್ಯ ಗುಣಗಳಿವೆ. ಸಾತ್ವಿಕ ಆಹಾರವೆಂದರೆ ಹಾಲು, ಬೆಣ್ಣೆ, ತುಪ್ಪ , ಹಸುರು ತರಕಾರಿ, ಹಣ್ಣುಗಳು ಇತ್ಯಾದಿ. ರಾಜಸವೆಂದರೆ ಅತೀ ಬಿಸಿ, ಖಾರ, ಹುಳಿ, ಉಪ್ಪು ಹೆಚ್ಚಾಗಿರು ವುದು. ತಾಮಸಿಕವೆಂದರೆ ಜಡತ್ವವನ್ನುಂಟು ಮಾಡುವ ಆಹಾರ ಅಂದರೆ ತಂಗಳು ಇತ್ಯಾದಿ. ರಾಜಸ ಮತ್ತು ತಾಮಸ ಗುಣವುಳ್ಳ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಜಡತ್ವ ಹೆಚ್ಚಾಗುತ್ತದೆ ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯು ಕುಂಠಿತವಾಗುತ್ತದೆ. ಸತ್ವಯುತವಾದ ಸಾತ್ವಿಕ ಆಹಾರ ಮತ್ತು ಅವರವರ ದೇಹ ಪ್ರಕೃತಿಗೆ ಹೊಂದಿಕೊಳ್ಳುವಂಥ ಆಹಾರವನ್ನೇ ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.

ಲಘು ಆಹಾರ: ಲಘು ಆಹಾರವೆಂದರೆ ಸುಲಭವಾಗಿ ಜೀರ್ಣವಾಗುವಂಥದ್ದು. ಸಾತ್ವಿಕ ಗುಣವುಳ್ಳ ಆಹಾರವನ್ನು ಲಘು ಆಹಾರವೆಂದು ಪರಿಗಣಿಸಲಾಗುತ್ತದೆ. ಇದನ್ನು ಕೊಂಚ ಹೆಚ್ಚು ತೆಗೆದುಕೊಂಡರೂ ಸಮಸ್ಯೆಯಾಗದು. ಆದರೆ ಅತಿಯಾಗಬಾರ ದಷ್ಟೇ. ಲಘು ಆಹಾರಗಳು ಜೀರ್ಣವಾಗಲು ಕನಿಷ್ಠ 40ರಿಂದ 60 ನಿಮಿಷಗಳು ಸಾಕು. ಅದರಲ್ಲೂ ದ್ರವಾಹಾರಗಳಾದ ನೀರು 10- 20 ನಿಮಿಷ, ಸಕ್ಕರೆ ಸೇರಿಸದ ತಾಜಾ ಹಣ್ಣಿನ ರಸ 20- 40 ನಿಮಿಷ ತೆಗೆದುಕೊಳ್ಳುತ್ತದೆ.

ಶರೀರದಲ್ಲಿನ ಅಗ್ನಿಯು ಮಂದವಾಗಿದ್ದಾಗ ಲಘು ಆಹಾರ ವನ್ನೇ ತೆಗೆದುಕೊಳ್ಳಬೇಕು. ಜಠರಾಗ್ನಿ ಮಂದವಾದಾಗ ವಾತವನ್ನು ಹೆಚ್ಚಿಸುವ ಜಡ, ಎಣ್ಣೆಯ ಪದಾರ್ಥಗಳನ್ನು ಸೇವಿಸಿದರೆ ಅಗ್ನಿಯು ಇನ್ನಷ್ಟು ದುರ್ಬಲವಾಗಿ ಶರೀರದಲ್ಲಿ ಅಜೀರ್ಣ ಸಂಬಂಧಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹೆಚ್ಚಿನವರು ಪೌಷ್ಟಿಕ ಆಹಾರಕ್ಕಿಂತ ರುಚಿಯ ಕಡೆಗೆ ಒಲವು ತೋರಿಸುತ್ತಾರೆ. ಇದು ಶರೀರದಲ್ಲಿ ಅಜೀರ್ಣಕ್ಕೆ ಕಾರಣವಾಗಿ ವಾಯುವಿನ ರೂಪದಲ್ಲಿ ತಲೆಯ ವರೆಗೂ ಹೋಗಿ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಘನ ಆಹಾರ: ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಆಹಾರವನ್ನು ಘನ ಆಹಾರ ಎನ್ನುತ್ತೇವೆ. ಎಣ್ಣೆಯಲ್ಲಿ ಕರಿದ ತಿಂಡಿಗಳು, ತುಪ್ಪ, ಮಾಂಸಾಹಾರ ಇತ್ಯಾದಿ. ಘನ ಆಹಾರಗಳು ಜೀರ್ಣವಾಗಲು ಸುಮಾರು 6 ರಿಂದ 8 ಗಂಟೆಗಳು ಬೇಕು. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಕಾರಣ ಇವುಗಳ ಸೇವನೆಯಲ್ಲಿ ಇತಿಮಿತಿ ಅಗತ್ಯ.

Advertisement

ನಮ್ಮ ಆಹಾರದಲ್ಲಿ ಲವಣ ಅಂದರೆ ಆಯೋಡಿನ್‌ಯುಕ್ತ ಉಪ್ಪಿನ ಪ್ರಮಾಣ ದಿನಕ್ಕೆ 5 ಗ್ರಾಂ ಗಿಂತಲೂ ಕಡಿಮೆ ಇರಬೇಕು. ಸಿಹಿ ಪದಾರ್ಥಗಳ ಸೇವನೆ ಶೇ. 10ರಷ್ಟು ಅಂದರೆ ಗರಿಷ್ಠ 50 ಗ್ರಾಂ, ಕೊಬ್ಬಿನ ಪ್ರಮಾಣ 100-150 ಗ್ರಾಂ-ಅಂದರೆ ಒಟ್ಟು ಶೇ. 30 ರಷ್ಟಿರಬೇಕು. ಗೆಡ್ಡೆ, ಗೆಣಸಿನ ಹೊರತಾಗಿ ಹಣ್ಣು ತರಕಾರಿಗಳ ಸೇವನೆ ಪ್ರಮಾಣ ದಿನಕ್ಕೆ 400 ಗ್ರಾಂ ನಷ್ಟಿರಬೇಕು. ಉಳಿದಂತೆ ಪ್ರೋಟಿನ್‌ಯುಕ್ತ ಆಹಾರಗಳನ್ನು ಸೇವಿಸಬಹುದು. ಇದರಲ್ಲಿ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆಗಳು ಸಾಮಾನ್ಯ.

ಪದೇಪದೆ ತಿನ್ನುವುದು ಸರಿಯೇ?: ಉಪಾಹಾರ ಮತ್ತು ಊಟದ ಮಧ್ಯೆ ಲಘುವಾಗಿ ಏನಾದರೂ ತಿನ್ನುವ ಬಯಕೆ ಉಂಟಾಗುತ್ತದೆ. ಇದನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಉತ್ತಮ. ಇಲ್ಲವಾದರೆ ದ್ರವ ಆಹಾರಗಳನ್ನು ಸೇವಿಸಬಹುದು. ಯಾವುದೇ ಕಾರಣಕ್ಕೂ ಪ್ಯಾಕ್‌ ಮಾಡಿದ ಆಹಾರಗಳು, ಕರಿದ ತಿಂಡಿಗಳು, ಬೇಕರಿ ತಿನಿಸುಗಳನ್ನು ತಿನ್ನದೇ ಇರುವುದೇ ಉತ್ತಮ. ಬೇಯಿಸಿದ ಅಥವಾ ಸ್ಟೀಮ್‌ನಲ್ಲಿಟ್ಟು ಬೇಯಿಸಿದ ಆಹಾರಕ್ಕೆ ಆದ್ಯತೆ ಕೊಟ್ಟರೆ ಉತ್ತಮ ಆರೋಗ್ಯ ಸಾಧ್ಯ.

ಆಹಾರ ಸೇವನೆಯಲ್ಲಿ ಸಮಯ ಪಾಲನೆ ಅತ್ಯಗತ್ಯ. ನಾಲಗೆ ಚಪಲಕ್ಕಾಗಿ ಏನಾದರೂ ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕ್ರಮೇಣ ಕಾಣಿಸಿಕೊಳ್ಳತೊಡಗುತ್ತವೆ. ಅಲ್ಲದೇ ನಾವು ಸೇವಿಸುವ ಆಹಾರದಲ್ಲಿರುವ ಪೌಷ್ಟಿಕಾಂಶವೂ ದೇಹಕ್ಕೆ ಸರಿಯಾಗಿ ಸೇರದು. ಅತ್ಯುತ್ತಮ ಪೋಷಕಾಂಶಗಳೂ ದೇಹದಿಂದ ಹೊರಕ್ಕೆ ಹೋಗುತ್ತವೆ. ಬೀಸುವ ಕಲ್ಲಿಗೆ ಸ್ವಲ್ಪಸ್ವಲ್ಪವೇ ಧಾನ್ಯ ಹಾಕಿದರೆ ಹಿಟ್ಟು ಚೆನ್ನಾಗಿ ಬರುತ್ತದೆ. ಅದೇ ರೀತಿ ಹೆಚ್ಚು ಧಾನ್ಯವನ್ನು ಹಾಕಿದರೆ ಸಂಪೂರ್ಣ ಹಿಟ್ಟಿನ ರೂಪ ಸಿಗದು. ಅದೇ ರೀತಿ ಸಮತೋಲಿತ ಆಹಾರ ಸಮಯಕ್ಕೆ ಸರಿಯಾಗಿ ತೆಗೆದುಕೊಂಡರೆ ಮಾತ್ರ ಎಲ್ಲ ಪೋಷಕಾಂಶಗಳು ಹೀರಲ್ಪಟ್ಟು ದೇಹಕ್ಕೆ ಶಕ್ತಿಯನ್ನು ಕೊಡಬಲ್ಲದು. ಇಲ್ಲವಾದರೆ ಅದು ಸರಿಯಾಗಿ ಜೀರ್ಣವಾಗದೆ ದೇಹದಿಂದ ಹೊರಕ್ಕೆ ಹೋಗುವುದು. ಪದೇಪದೆ ತಿನ್ನುವುದನ್ನು ನಿಯಂತ್ರಿಸಿದಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಒಂದು ವೇಳೆ ಏನಾದರೂ ತಿನ್ನುವ ಬಯಕೆ ಉಂಟಾಗುತ್ತಿದ್ದರೆ ಅದನ್ನು ನಿಯಂತ್ರಿಸಲು ಆಗದೇ ಇದ್ದ ಸಂದರ್ಭದಲ್ಲಿ ತಜ್ಞ  ವೈದ್ಯರನ್ನು ಸಂಪರ್ಕಿಸಬೇಕು. ಆಹಾರ ಸೇವನೆಯ ಅನಂತರ ಯಾವುದೇ ಕಾರಣಕ್ಕೂ ಹೊಟ್ಟೆ ಉಬ್ಬಿದ ಹಾಗೆ ಆಗಬಾರದು, ಇಂದ್ರಿಯಗಳಿಗೆ ಕಷ್ಟ ವಾ ಗಬಾ ರದು, ಎದೆ ಯಲ್ಲಿ ಉರಿ, ನೋವು, ನಿಲ್ಲಲು, ಕುಳಿ ತು ಕೊ ಳ್ಳಲು, ಮಲ ಗಲು, ನಡೆ ದಾ ಡಲು ಕಷ್ಟ ವಾ ಗ ಬಾ ರದು. ಮೊದಲು ಸೇವಿಸಿರುವ ಆಹಾರ ಪೂರ್ಣವಾಗಿ ಜೀರ್ಣವಾದ ಅನಂತರವೇ ಮತ್ತೆ ತಿನ್ನಬಹುದು. ಈ ನಿಯಮವನ್ನು ಪಾಲಿಸದೇ ಇದ್ದರೆ ಹಿಂದೆ ಸೇವಿಸಿದ ಆಹಾರ ಅಜೀರ್ಣವಾಗಿ ಉಳಿದು ಶರೀರದಲ್ಲಿ ಅಸಮತೋಲನ ಉಂಟು ಮಾಡುತ್ತದೆ.

 

ಡಾ| ಸತೀಶ್‌ ಶಂಕರ ಬಿ.

ಆಯುರ್ವೇದ ತಜ್ಞರು,  ಗಂಜಿಮಠ

Advertisement

Udayavani is now on Telegram. Click here to join our channel and stay updated with the latest news.

Next