ಧಾರವಾಡ: ಲಯನ್ಸ್ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಜನರ ಜೀವನ ಮಟ್ಟ ಸುಧಾರಿಸಲು ಮೊದಲ ಆದ್ಯತೆ ನೀಡಬೇಕು ಎಂದು ಲಯನ್ಸ್ ಕ್ಲಬ್ ಮಾಜಿ ಗರ್ವನರ್ ಡಾ|ರವಿ ನಾಡಗೇರ ಹೇಳಿದರು. ನಗರದ ಐಎಂಎ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಧಾರವಾಡ ಜಿಲ್ಲಾ 317-ಬಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್‌ಗ 200 ವರ್ಷಗಳ ಇತಿಹಾಸವಿದ್ದು, ಜಿಲ್ಲಾ ಲಯನ್ಸ್ ಕ್ಲಬ್ ಕಳೆದ 52 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ ಎಂದರು. ಮುಂಬರುವ ದಿನಗಳಲ್ಲಿ ಈವರೆಗೆ ಲಯನ್ಸ್ ಕ್ಲಬ್ 50 ಮಿಲಿಯನ್ ಜನರಿಗೆ ತಲುಪಿದ್ದು, ಮುಂದಿನ ಒಂದು ವರ್ಷದಲ್ಲಿ 100 ಮಿಲಿಯನ್ ಜನರಿಗೆ ತಲುಪಲು ಗುರಿ ಇಟ್ಟುಕೊಳ್ಳಲಾಗಿದೆ.
ಶಿಕ್ಷಣ, ಪರಿಸರ, ಹಸಿವು ಮುಕ್ತ ಭಾರತ ಹಾಗೂ ಮಕ್ಕಳ ಬಾಲ್ಯವನ್ನು ಕಾಪಾಡಲು ಈ ಬಾರಿ ಆದ್ಯತೆ ನೀಡಲಾಗುತ್ತಿದೆ ಎಂದರು. ಕೇವಲ ದಿನ ಆಚರಿಸುವುದರ ಬದಲಿಗೆ ಅವುಗಳನ್ನು ಅರ್ಥಪೂರ್ಣಗೊಳಿಸಲು ಶ್ರಮಿಸಬೇಕಿದೆ ಎಂದರು. ಲಯನ್ಸ್ ಕ್ಲಬ್ ಜಿಲ್ಲಾ 317-ಬಿ ಅಧ್ಯಕ್ಷ ಡಾ|ನವಿನ್ ಮಂಕಣಿ ಮಾತನಾಡಿ, ಲಯನ್ಸ್ ಕ್ಲಬ್‌ನ 52ನೇ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸದ ತಂದಿದೆ.
ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಬರುವ ದಿನಗಳಲ್ಲಿ ಬಿಆರ್‌ಟಿಎಸ್ ರಸ್ತೆ ಪಕ್ಕದಲ್ಲಿ ಕನಿಷ್ಟ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮ, ರಸ್ತೆಗಳ ಅಕ್ಕಪಕ್ಕದಲ್ಲಿ ಕುಡಿದು ವಾಹನ ಚಲಿಸದಂತೆ ನಾಮಫಲಕ, ಲಯನ್ಸ್ ಕ್ಲಬ್ ಶಾಲೆಗೆ ಬೆಂಚ್ ದೇಣಿಗೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಇದಕ್ಕೂ ಮುನ್ನ ಲಯನ್ಸ್ ಕ್ಲಬ್ ಧಾರವಾಡ ಜಿಲ್ಲಾ 317-ಬಿ ಅಧ್ಯಕ್ಷರಾಗಿ ಆಯ್ಕೆಯಾದ ಡಾ|ನವಿನ್ ಮಂಕಣಿ, ಕಾರ್ಯದರ್ಶಿಯಾಗಿ ಡಾ|ಗಿರೀಶ ನಾಡಗೇರ, ಸಹ ಕಾರ್ಯದರ್ಶಿಯಾಗಿ ಎಂ.ಎ. ಮುಮ್ಮಿಗಟ್ಟಿ, ಖಜಾಂಚಿಯಾಗಿ ವಿದ್ಯಾಧರ ಅಂಗಡಿ, ಸಹ ಖಜಾಂಚಿಯಾಗಿ ದಿನೇಶ ಮೆಹ್ತಾ, ಸದಸ್ಯರಾಗಿ ದಿನೇಶ ಕುಲಕರ್ಣಿ, ಭುಜಂಗ ಶೆಟ್ಟಿ, ಡಾ|ವಿಜಯ ಜ್ಯೋತಿ, ಶೈಲಾ ಕರಗುದರಿ, ಅನಿಲ ಘಾಸ್ತೆ, ಧೃವರಾಜ ಮೇಲಗಿರಿ, ಜಯರಾಮ ಗುಮಾಸ್ತೆ,
-ರಾಮನಾಥ ಹೆಗಡೆ, ವಿಜಯ ಮುಧೋಳಕರ, ಹರ್ಷ ಡಂಬಳ ಅ ಧಿಕಾರ ಸೀಕರಿಸಿದರು.ಹರ್ಷ ದೇಸಾಯಿ, ಡಾ|ಸರಾಯು ತಾವರಗೇರಿ, ಡಾ|ಕೆ.ವಿ.ಅಚ್ಯುತ್, ಭುಜಂಗ ಎಂ.ಶೆಟ್ಟಿ, ನಳನಿ ಬಡಗಿ, ಡಾ|ಸುಧಾ ಗೋಕಲೆ ಇದ್ದರು. ಅನುಪಮ ನಾಡಗೇರ ಪ್ರಾರ್ಥಿಸಿದರು. ಡಾ|ಕೃಷ್ಣ ತಾವರಗೇರಿ ಸ್ವಾಗತಿಸಿದರು. ಗಿರಿಧರ ದೇಸಾಯಿ, ಜಯಶ್ರೀ ಪಾಟೀಲ ವರದಿ ವಾಚಿಸಿದರು. ಕವಿತಾ ಅಂಗಡಿ, ಸವಿತಾ ಕುಸಗಲ್ ನಿರೂಪಿಸಿದರು. ಡಾ|ಗಿರೀಶ ನಾಡಗೇರ ವಂದಿಸಿದರು.