Advertisement

ಮುಂಜಾಗ್ರತಾ ಕ್ರಮ ಪಾಲನೆ ಅವಶ್ಯ

03:38 PM May 03, 2020 | Suhan S |

ಶಿರಹಟ್ಟಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ದಿಟ್ಟ ಕ್ರಮದಿಂದಾಗಿ ಮತ್ತು ದೇಶದ ಜನತೆಯ ಸಹಕಾರದಿಂದಾಗಿ ಕೋವಿಡ್ 19 ಅನ್ಯ ರಾಷ್ಟ್ರಗಳೀಗ ಸಾಕಷ್ಟು ನಿಯಂತ್ರಣದಲ್ಲಿದೆ. ಸಾರ್ವಜನಿಕರು ಕೋವಿಡ್ 19 ವೈರಸ್‌ ಬಗ್ಗೆ ಆತಂಕ ಪಡದೇ ಅಗತ್ಯ ಕ್ರಮಗಳನ್ನು ಪಾಲಿಸುವುದು ಅವಶ್ಯ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

Advertisement

ಅವರು ಪಟ್ಟಣದ ಸರಕಾರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಆಶಾ ಕಾರ್ಯಕರ್ತರಿಗೆ, ತಾಲೂಕು ಆಸ್ಪತ್ರೆಯ ಡಿ.ದರ್ಜೆ ಗುತ್ತಿಗೆಯ ಸಹಾಯಕರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದರು. ಕೋವಿಡ್ 19ಯೋಧರ ಸೇವಾ ಕಾರ್ಯವನ್ನು ಮೆಚ್ಚಿ ಪಟ್ಟಣದ ವರ್ತಕರ ಸಂಘದವರು ದಿನಸಿ ಕಿಟ್‌ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ವರ್ತಕರಾದ ಉಮೇಶ ಗಾಣಿಗೇರ ಮತ್ತು ಬಸವರಾಜ ಹೊಸೂರ ಮತ್ತು ವಾಸಣ್ಣ ಪಾಶ್ಚಾಪೂರ, ಪ್ರಕಾಶ ಭೋರಶೆಟ್ಟರ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಹಶೀಲ್ದಾರ್‌ ಯಲ್ಲಪ್ಪ ಗೋಣೆಣ್ಣವರ, ಚಂದ್ರಣ್ಣ ನೂರಶೆಟ್ಟರ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ವರ್ತಕರ ಸಂಘದ ಅಧ್ಯಕ್ಷ ಸುರೇಶ ಕಪ್ಪತ್ತನವರ, ನಾಗರಾಜ ಲಕ್ಕುಂಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next