Advertisement
ತಾಲೂಕಿನಲ್ಲಿ ಇದುವರೆಗೆ ವಾಡಿಕೆಯಂತೆ 112 ಮಿಮೀ ಮಳೆ ಆಗಬೇಕಾಗಿದ್ದು, ಇಲ್ಲಿಯವರೆಗೆ 101 ಮಿಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಿಂದ ತಾಲೂಕಿನ ಕೃಷಿ ಇಲಾಖೆಯು ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ, ಲಘು ಪೋಷಕಾಂಶ, ಸಾವಯವಗೊಬ್ಬರ, ಮುಂತಾದವುಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿ ವಿತರಿಸುತ್ತಿದೆ.
ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಬೆಳಗಾವಿಯ ಶಿವಾಜಿ ನಗರದಲ್ಲಿ ರೈತ ಸಂಪರ್ಕ ಕೇಂದ್ರ, ಕಾಕತಿ ಪಿಕೆಪಿಎಸ್ ಸೊಸೈಟಿಯಲ್ಲಿ ರೈತ ಸಂಪರ್ಕ ಕೇಂದ್ರ-ಕಾಕತಿ, ಉಚಗಾಂವ ರೈತ ಸಂಪರ್ಕ ಕೇಂದ್ರ, ಬೆಳಗುಂದಿ ಹಾಗೂ ನಂದಿಹಳ್ಳಿ ಪಿ.ಕೆ.ಪಿ.ಎಸ್, ಹಿರೇಬಾಗೇವಾಡಿ ಪಿ.ಕೆ.ಪಿ.ಎಸ್, ಹಲಗಾ ಪಿ.ಕೆ.ಪಿ.ಎಸ್, ಬೆಂಡಿಗೇರಿ ಪಿ.ಕೆ.ಪಿ.ಎಸ್, ಬಡಾಲ ಅಂಕಲಗಿ, ಮಾರೀಹಾಳ ಪಿ.ಕೆ.ಪಿ.ಎಸ್ ಹಾಗೂ, ಮೋದಗಾ ಪಿ.ಕೆ.ಪಿ.ಎಸ್ ಕೇಂದ್ರಗಳಲ್ಲಿ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತರು ತಮ್ಮ ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಉಪಯೋಗ ಮಾಡಿದ ರಸಗೊಬ್ಬರ ಬೆಳೆಗಳಿಗೆ ಸಮರ್ಪಕವಾಗಿ ತಲುಪುವಂತೆ ಮಾಡಲು ಜೈವಿಕ ಗೊಬ್ಬರ ಹಾಗೂ ಲಘು ಪೋಷಕಾಂಶಗಳಾದ ಜಿಂಕ್, ಬೋರಾಕ್ಸ ಹುಡಿ ದ್ರವ ರೂಪದ ಗೊಬ್ಬರಗಳನ್ನು ತಪ್ಪದೇ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.