ಕೊರಟಗೆರೆ: ಮಾಜಿ ಉಪಮುಖ್ಯಮಂತ್ರಿ, ಶಾಸಕರಾದ ಡಾ.ಜಿ.ಪರಮೇಶ್ವರ್ ಅವರು ಕೋವಿಡ್ ನಿಂದ ಶೀಘ್ರ ಗುಣಮುಖವಾಗಲೆಂದು ದೇವಸ್ಥಾನಗಳಲ್ಲಿ ಪೂಜೆ ಮಸೀದಿಗಳಲ್ಲಿ ಚರ್ಚ್ ಪ್ರಾರ್ಥನೆ ಗಳನ್ನು ಅವರ ಆಭಿಮಾನಿಗಳು ಕಾರ್ಯಕರ್ತರು ಸಲ್ಲಿಸುತ್ತಿದ್ದಾರೆ .
ಪಟ್ಟಣದ ಪ್ರಸಿದ್ದ ಗಂಗಾಧರೇಶ್ವರ ಬೆಟ್ಟದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮುಖಂಡ ಕೆ.ಎಂ ಸುರೇಶ್, ಕೋವಿಡ್ ಮೂರನೇ ಅಲೆಯಲ್ಲು ಶಾಸಕರು ಜನರ ಜೊತೆ ನಿರಂತರ ಸಂಪರ್ಕವಿದ್ದು ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು, ಕೋವಿಡ್ ಸಂಖ್ಯೆ ಹೆಚ್ಚಿದ್ದ ವೇಳೆ ಅವರು ಕ್ಷೇತ್ರ ಜನರಿಗೆ ಮಾಡಿದ ಸೇವೆ, ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿದೆ, ಈಗ ಅವರು ಬೇಗ ಗುಣ ಮುಖರಾಗಿ ಕ್ಷೇತ್ರಕ್ಕೆ ಬರುವಂತಾಗಲಿ ಎಂದು ಪಟ್ಟಣ ಪಂಚಾಯತಿಯ ಮಾಜಿ ಸದಸ್ಯರು ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.
ಆಟೋ ಕುಮಾರ್ ಮಾತನಾಡಿ ಶಾಸಕರಾದ.ಪರಮೇಶ್ವರ ರವರು ಕೋವಿಡ್ ಸಂದರ್ಭದಲ್ಲಿ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಎಂದು ವಿಶೇಷ ಸೇವೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕೈಗೊಂಡರು, ಕ್ಷೇತ್ರದ ಸಾವಿರಾರು ಬಡ ಕುಟುಂಬಗಳಿಗೆ ಮತ್ತು ಕೊರೋನಾ ವಾರಿಯರ್ಸ್ ರವರಿಗೆ ಆಹಾರ ಕಿಟ್ ವಿರಿಸಿದರು,ಕ್ಷೇತ್ರದಲ್ಲಿ ಕರೋನಾ ರೋಗಿಗಳ ಮನೆಬಾಗಿಲಿಗೆ ವೈದ್ಯರನ್ನು ಕಳುಹಿಸಿ ಉಚಿತ ಔಷಧ ಕಿಟ್ ನೀಡಿದ ನಾಡಿನ ಮೊದಲ ಶಾಸಕರಾಗಿದ್ದಾರೆ, ಅವರು ಗುಣ ಮುಖವಾಗಲೆಂದು ಎಲ್ಲಾ ಧರ್ಮದವರು ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದು, ನಾವೆಲ್ಲರೂ ಪೂಜೆ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸದಸ್ಯರಾದ ಕೆ.ಬಿ.ಲೋಕೇಶ್ ಕೆ.ವಿ.ಪುರುಷೋತ್ತಮ್ ಮುಖಂಡರಾದ ಸತೀಶ್, ಮಲ್ಲೇಶ್ ಗಂಗಾಧರ್ ಗೋಪಿನಾಥ್, ಲಕ್ಷೀಕಾಂತ್, ಉಮೇಶ್, ಅರ್ಚಕ ಬಾಲಾಜಿ ಸೇರಿದಂತೆ ಇತರರು ಹಾಜರಿದ್ದರು.
ಕೋವಿಡ್ ಪಾಸಿಟಿವ್ ಆಗಿರುವ ಪರಮೇಶ್ವರ್ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.